ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ

 

ಬೆಂಗಳೂರು,ಮೇ17- ಬಿಜೆಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿರುವುದು ಹಾಗೂ ಬಹುಮತ ಸಾಬೀತುಪಡಿಸಲು 15 ದಿನಗಳ ದೀರ್ಘ ಕಾಲಾವಕಾಶ ನೀಡಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕದ ಸಂಘಟನೆ ಮುಖಂಡ ಪೆÇ್ರ.ರವಿವರ್ಮಾ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗಿಂತ ಮೊದಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ರಾಜ್ಯಪಾಲರ ಬಳಿ ಹೋಗಿ ನಾವು 117 ಬೆಂಬಲಿಗರ ಪಟ್ಟಿಯನ್ನು ಸಾಬೀತುಪಡಿಸುತ್ತೇವೆ. ನಮಗೆ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಕೇಳಿದ್ದರೂ ರಾಜ್ಯಪಾಲರೂ ಬಿಜೆಪಿಯವರಿಗೆ ಸಮಯಾವಕಾಶ ಕೊಟ್ಟಿರುವುದು ಸರಿಯಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. 162ನೇ ಪರಿಚ್ಛೇದ 2ನೇ ಉಪಪಂಗಡ ಪ್ರಕಾರ ಯಾರು ಬಹುಸಂಖ್ಯ ಬೆಂಬಲಿಗರನ್ನು ಹೊಂದಿರುತ್ತಾರೋ ಅವರಿಗೆ ಅಧಿಕಾರವನ್ನು ನೀಡಬೇಕು. ಆದರೆ ರಾಜ್ಯಪಾಲರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋವಾ ಮಣಿಪುರ ಮತ್ತು ಮೇಘಾಲಯ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದ್ದಾಗಲೂ ಬಿಜೆಪಿ ಇತರೆ ಪಕ್ಷಗಳ ಜೊತೆ ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಂಡು ಬಹುಮತ ಸಾಬೀತು ಮಾಡುವ ಅಂಕಿಸಂಖೈಯನ್ನು ಮುಂದಿಟ್ಟಾಗ ಅದಕ್ಕೆ ಅವಕಾಶ ನೀಡಲಾಗಿದೆ. ಈಗ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಉದ್ಭವಿಸಿದ್ದರೂ ಇಲ್ಲಿ ಮಾತ್ರ ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನಿರಾಕರಿಸಲಾಗಿದೆ. ಬಿಜೆಪಿಗೊಂದು ನ್ಯಾಯ ಇತರರಿಗೊಂದು ನ್ಯಾಯ ಎಂಬ ಪರಿಸ್ಥಿತಿ ಏರ್ಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ