
ತುಮಕೂರು, ಮೇ 17- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
ನೂತನ ಶಾಸಕ ಜ್ಯೋತಿ ಗಣೇಶ್ ಬೆಂಬಲಿಗರು ಹಾಗೂ ಪಕ್ಷದ ಅಭಿಮಾನಿಗಳು ನಗರದ ಟೌನ್ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ ಕಾಂಗ್ರೆಸ್, ಜೆಡಿಎಸ್ ಸರ್ಕಾರ ರಚನೆಗೆ ತೊಡರುಗಾಲು ಹಾಕಿವೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಣಿಗಲ್ನಲ್ಲಿ ಡಿ.ಕೃಷ್ಣಕುಮಾರ್ ಬೆಂಬಲಿಗರು, ತುರುವೆಕೆರೆಯಲ್ಲಿ ನೂತನ ಶಾಸಕ ಮಸಾಲೆ ಜಯರಾಂ ಬೆಂಬಲಿಗರು, ಕಾರ್ಯಕರ್ತರು, ತಿಪಟೂರಿನಲ್ಲಿ ಬಿ.ಸಿ.ನಾಗೇಶ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ಚಿಕ್ಕನಾಯಕನಹಳ್ಳಿಯಲ್ಲಿ ಜೆ.ಸಿ.ಮಾದುಸ್ವಾಮಿ ಬೆಂಬಲಿಗರು, ಕಾರ್ಯಕರ್ತರು, ಶಿರಾದಲ್ಲಿ ಎಸ್.ಆರ್.ಗೌಡರು ಹಾಗೂ ಕಾರ್ಯಕರ್ತರು, ಪಾವಗಡದಲ್ಲಿ ಬಲರಾಮ್ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. ಕೊರಟಗೆರೆ ಬಸ್ ನಿಲ್ದಾಣದಲ್ಲಿ ವೈ.ಎಸ್.ಹುಚ್ಚಯ್ಯ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಖುಷಿಪಟ್ಟರು.