
ಚಿಕ್ಕಮಗಳೂರು, ಮೇ 15-ಚಿಕ್ಕಮಗಳೂರು ಜಿಲ್ಲೆಯ 4 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಎಂದಿನಂತೆ ಉಳಿಸಿಕೊಂಡಿದೆ.
ಕ್ಷೇತ್ರದ ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ, ಕಡೂರು ಕ್ಷೇತ್ರಗಳಲ್ಲಿ ಬಿಜೆಪಿ ನಿರಾಯಾಸ ಗೆಲುವು ಸಾಧಿಸಿದ್ದರೆ, ಶೃಂಗೇರಿಯಲ್ಲಿ ತೀವ್ರ ಜಿದ್ದಾಜಿದ್ದು ಎದುರಾಯಿತು.
ಮೀಸಲು ಕ್ಷೇತ್ರವಾದ ಮೂಡಿಗೆರೆಯಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ 58.589 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಮೋಟಮ್ಮ 46,135 ಸಾವಿರ ಮತ ಪಡೆದು ಸೋಲು ಕಂಡಿದ್ದಾರೆ. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಬಿ.ಬಿ.ನಿಂಗಯ್ಯ 21981 ಮತಗಳಿಸಿದ್ದಾರೆ.