
ಬೆಂಗಳೂರು,ಮೇ 15
ಭಾರೀ ಜಿದ್ದಾ-ಜಿದ್ದಿನಿಂದ ಕೂಡಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಬಿಜೆಪಿ ಸರಳ ಬಹುಮತ ಪಡೆಯುವತ್ತ ದಾಪುಗಾಲು ಇಟ್ಟಿದೆ.
ಈಗಾಗಲೇ ಬಿಜೆಪಿ ಖಾತೆ ತೆರಿದಿದೆ. ಮೂಡಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭಯಚಂದ್ರ ಜೈನ್ ವಿರುದ್ಧ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಭಾರೀ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
ಇನ್ನು ಬಿಜೆಪಿ 109 ಕ್ಷೇತ್ರ, ಕಾಂಗ್ರೆಸ್ 65, ಜೆಡಿಎಸ್ 41 ಮತ್ತು ಸ್ವತಂತ್ರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.