ಬೆಂಗಳೂರು:ಮೇ-15: ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಮತ ಎಣಿಕೆ ಆರ್.ಸಿ ಕಾಲೇಜನಲ್ಲಿ ನಡೆಯುತ್ತಿದ್ದು, ಕೆಲ ಗೊಂದಲ ಸೃಷ್ಟಿಯಾದ ಹಿನ್ನಲೆಯಲ್ಲಿ ಮತಎಣಿಕೆ ಕಾರ್ಯ ವಿಳಂಬವಾಗಿ ಆರಂಭವಾಯಿತು.
ಸರಿಯಾದ ಸಮಯಕ್ಕೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಸ್ಟ್ರಾಂಗ್ ರೂಂ ತೆರೆಯಲು ಸಾಧ್ಯವಾಗಿಲ್ಲ. ಇವಿಎಂ ಯಂತ್ರಗಳನ್ನು ಸಂಗ್ರಹಿಸಿರುವ ಸ್ಟ್ರಾಂಗ್ ರೂಂ ತೆರೆಯದೆ ಮತ ಎಣಿಕೆ ವಿಳಂಬವಾಗಿದೆ. ಹೀಗಾಗಿ ಮಾಧ್ಯಮದವರನ್ನು ಅಧಿಕಾರಿಗಳು ಹೊರ ಪ್ರವೇಶಿಸಲು ಬಿಟ್ಟಿಲ್ಲ.
ಮತ ಎಣಿಕೆ ಅರ್ಧ ತಾಸು ವಿಳಂಬವಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.