ಬೆಂಗಳೂರಿನಲ್ಲಿ ಯಾವಕ್ಷೇತ್ರದಲ್ಲಿ ಯಾವ ಪಕ್ಷದ ಯಾವ ಅಭ್ಯರ್ಥಿಗೆ ಮುನ್ನಡೆ; ಯಾವ ಅಭ್ಯರ್ಥಿಗೆ ಹಿನ್ನಡೆ: ಇಲ್ಲಿದೆ ಮಾಹಿತಿ:

ಬೆಂಗಳೂರು:ಮೇ-15: ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದ್ದು, ಇನ್ನೇನು ಕೆಲಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ವಿಪಕ್ಷ ಬಿಜೆಪಿ ಮುನ್ನಡೆಕಾಯ್ದುಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ತೀವ್ರ ಹಿನ್ನಡೆ ಸಾಧಿಸಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಯಾವ ಪಕ್ಷ ಹಾಗೂ ಯಾರು ಪ್ರಾಬಲ್ಯ ಮೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಬಿಬಿಎಂಪಿ ದಕ್ಷಿಣ ಭಾಗದಲ್ಲಿ ಇರುವ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಮೂರು ಶಾಸಕರನ್ನು ಹೊಂದಿದ್ದು ಜೆಡಿಎಸ್ ಇಲ್ಲಿ ಪ್ರಾಬಲ್ಯ ಕಳೆದುಕೊಂಡಿದೆ.

ಈ ಬಾರಿಯೂ ಉಭಯ ರಾಷ್ಟ್ರೀಯ ಪಕ್ಷಗಳ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದ್ದು ಜೆಡಿಎಸ್ ಈ ಬಾರಿಯೂ ಇಲ್ಲಿ ಖಾತೆ ತೆರೆಯುವುದು ಅನುಮಾನವಾಗಿದೆ.

ಬಿಬಿಎಂಪಿ ದಕ್ಷಿಣ ಭಾಗದ ಒಟ್ಟು ಮತದಾರರ ಸಂಖ್ಯೆ 1602637. ಈ ಭಾಗದ ಆರು ಕ್ಷೇತ್ರಗಳಲ್ಲಿ ಮತದಾನ ಮಾಡಿರುವವರ ಸಂಖ್ಯೆ 850615. ಮತ ಚಲಾಯಿಸಿರುವವರು ಪುರುಷರು 438505, ಮಹಿಳೆಯರು 407181. ಶೇಕಡ 49ರಷ್ಟು ಮತದಾನ

ಬಸವನಗುಡಿ ಕ್ಷೇತ್ರದ ಮತದಾರರ ಸಂಖ್ಯೆ 245325

ಮತ ಚಲಾಯಿಸಿರುವವರು
ಪುರುಷರು 67657
ಮಹಿಳೆಯರು 62594
ಒಟ್ಟು ಮತ ಚಲಾಯಿಸಿದವರು 129875
ಶೇಕಡ 52.94

ಇಲ್ಲಿ ಹಾಲಿ ಶಾಸಕ ಬಿಜೆಪಿಯ ರವಿಸುಬ್ರಮಣ್ಯ ಹಾಗು ಕಾಂಗ್ರೆಸ್ ನ ಬೋರೇಗೌಡ ನಡುವೆ ನೇರ ಸ್ಪರ್ಧೆ ಇದ್ದು ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಬೊಮ್ಮನಹಳ್ಳಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 203184

ಮತಚಲಾಯಿಸಿರುವವರು
ಪುರುಷರು 47648
ಮಹಿಳೆಯರು 48351
ಒಟ್ಟು ಮತಚಲಾವಣೆ 95862
ಶೇಕಡ 47.18
ಇಲ್ಲಿ ಬಿಜೆಪಿ ಹಾಲಿ ಶಾಸಕ ಸತೀಶ್ ರೆಡ್ಡಿ ಹಾಗು ಕಾಂಗ್ರೆಸ್ ಅಭ್ಯರ್ಥಿ ಸುಷ್ಮಾ ರಾಜಗೋಪಾಲರೆಡ್ಡಿ ನಡುವೆ ಸ್ಪರ್ಧೆ ಇದ್ದು ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಬಿಟಿಎಂ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 270493

ಮತಚಲಾಯಿಸಿರುವವರು
ಪುರುಷರು 71240
ಮಹಿಳೆಯರ 64237
ಒಟ್ಟು ಮತದಾನ ಮಾಡಿದವರು140656
ಶೇಕಡ 52
ಇಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರೂ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಬಿಜೆಪಿಯ ಲಲ್ಲೇಶ್ ರಡ್ಡಿ ನಡುವೆ ಹಣಾಹಣಿ ಇದ್ದು ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಪದ್ಮನಾಭನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 278219

ಮತ ಚಲಾಯಿಸಿರುವವರು
ಪುರುಷರು 82491
ಮಹಿಳೆಯರು 78875
ಒಟ್ಟು ಮತದಾನ 161369
ಶೇಕಡ 58
ಇಲ್ಲಿ ಬಿಜೆಪಿ ಹಾಲಿ‌ ಶಾಸಕ ಹಾಗು ಮಾಜಿ ಡಿಸಿಎಂ ಆರ್.ಅಶೋಕ್ ಹಾಗು ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೀನಿವಾಸ್ ನಡುವೆ ಸ್ಪರ್ಧೆ ಇದ್ದು ಜೆಡಿಎಸ್ ಕೂಡ ಪ್ರತಿರೋಧ ಒಡ್ಡಲಿದೆ,ಆದರೂ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಗೋವಿಂದರಾಜನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 292973

ಮತ ಚಲಾಯಿಸಿರುವವರು
ಪುರುಷರು 88177
ಮಹಿಳೆಯರು 78380
ಒಟ್ಟು ಮತದಾನ 166790
ಶೇಕಡ 56.93

ಇಲ್ಲಿ ಹಾಲಿ ಶಾಸಕ ಹಾಗೂ ಸಚಿವ ಎಂ.ಕೃಷ್ಣಪ್ಪ ಪುತ್ರ ಪ್ರಿಯಕೃಷ್ಣ ಹಾಗೂ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ.ಸೋಮಣ್ಣ ನಡುವೆ ನೇರ ಸ್ಪರ್ಧೆ ಇದ್ದು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ವಿಜಯನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 312443

ಮತಚಲಾಯಿಸಿರುವವರು
ಪುರುಷರು 81292
ಮಹಿಳೆಯರು 74744
ಒಟ್ಟು ಮತದಾನ 156065
ಶೇಕಡ 49.95

ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಬಿಜೆಪಿಯ ರವೀಂದ್ರ ನಡುವೆ ಸ್ಪರ್ಧೆ ಇದ್ದು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ.

 

ಬಿ.ಟಿ.ಎಂ. ಲೇಔಟ್ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿ ಗೆಲುವು ಸಾಧಿಸಿದ್ದಾರೆ. 12ನೇ ಸುತ್ತಿನಲ್ಲಿ ರಾಮಲಿಂಗಾರೆಡ್ಡಿ 20 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಬೊಮ್ಮನಹಳ್ಳಿಯಲ್ಲಿ ಬಿಜೆಪಿಯ ಸತೀಶ್‌ ರೆಡ್ಡಿಗೆ ಮತ್ತೊಮ್ಮೆ ಗೆಲುವು

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗೀತಾ ಮಹದೇವ ಪ್ರಸಾದ್ 12 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹಿನ್ನಡೆ ಸಾಧಿಸಿದ್ದು, ಬಿಜೆಪಿಯ ನಿರಂಜನ ಕುಮಾರ್ ಮುನ್ನಡೆ ಸಾಧಿಸಿದ್ದಾರೆ.
ಬಸವನಗುಡಿಯಲ್ಲಿ ರವಿ ಸುಬ್ರಹ್ಮಣ್ಯ, ಪದ್ಮನಾಭನಗರದಲ್ಲಿ ಆರ್‌. ಅಶೋಕ್‌ಗೆ ಭರ್ಜರಿ ಗೆಲುವು.

ಹೊಸದುರ್ಗ ಬಿಜೆಪಿಯ ಗೂಳಿಹಟ್ಟಿ ಶೇಖರ್‌ಗೆ 15 ಸಾವಿರ ಮತಗಳ ಅಂತರದಲ್ಲಿ ಗೆಲುವು. ಕಾಂಗ್ರೆಸ್‌ನ ಗೋವಿಂದಪ್ಪವನ್ನು ಸೋಲಿಸಿದ ಶೇಖರ್‌.

ಶಾಂತಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎನ್.ಎ.ಹ್ಯಾರಿಸ್ 1716 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇನ್ನು, ಸರ್ವಜ್ಞನಗರದಲ್ಲಿ ಸಚಿವ ಕೆ.ಜೆ. ಜಾರ್ಜ್ ಭಾರಿ ಮುನ್ನಡೆ ಸಾಧಿಸಿದ್ದಾರೆ.
ಗಾಂಧಿನಗರ ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ಮುನ್ನಡೆ ಸಾಧಿಸಿದ್ದು, ಗದಗ ಕ್ಷೇತ್ರದಲ್ಲಿ ಎಚ್.ಕೆ.ಪಾಟೀಲ್ 7,429 ಮತಗಳ ಅಂತರದಿಂದ ಹಿನ್ನಡೆ ಸಾಧಿಸಿದ್ದು, ಬಿಜೆಪಿಯ ಅನಿಲ್ ಮೆಣಸಿನಕಾಯಿ ಮುನ್ನಡೆ ಸಾಧಿಸಿದ್ದಾರೆ

ನಾಗಮಂಗಲ 2ನೇ ಸುತ್ತು: ಚೆಲುವರಾಯ ಸ್ವಾಮಿಗೆ ಜೆಡಿಎಸ್ ವಿರುದ್ಧ 5859 ಮತಗಳ ಹಿನ್ನಡೆ
ಪದ್ಮನಾಭನಗರದಲ್ಲಿ ಬಿಜೆಪಿಯ ಆರ್.ಅಶೋಕ್ ಗೆ ಗೆಲುವು, ಬೊಮ್ಮನಹಳ್ಳಿಯಲ್ಲಿ ಬಿಜೆಪಿಯ ಸತೀಶ್ ರೆಡ್ಡಿಗೆ ಜಯ.

ವಿಜಯನಗರದಲ್ಲಿ ಕಾಂಗ್ರೆಸ್ ನ ಆನಂದ್ ಸಿಂಗ್ ಮುನ್ನಡೆ. ಆನೇಕಲ್ ನಲ್ಲಿ ಬಿಜೆಪಿಯ ನಾರಾಯಣಸ್ವಾಮಿಗೆ ಮುನ್ನಡೆ, ಕೊಳ್ಳೇಗಾಲದಲ್ಲಿ ಬಿಎಸ್ ಪಿಯ ಎನ್.ಮಹೇಶ್ ಗೆ ಗೆಲುವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ