ವ್ಯಾಗಮೋನ್ ಸಿಮಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಪ್ರಕರಣ: ಶಿಕ್ಷೆ ಪ್ರಕಟ

ಕೊಚ್ಚಿ, ಮೇ 14-ವ್ಯಾಗಮೋನ್ ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ) ಶಸ್ತ್ರಾಸ್ತ್ರ ತರಬೇತಿ ಶಿಬಿರ ಪ್ರಕರಣದ ಸಂಬಂಧ ವಿಶೇಷ ಎನ್‍ಐಎ ನ್ಯಾಯಾಲಯ 18 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಇದೇ ಪ್ರಕರಣದಲ್ಲಿ ಇತರ 17 ಜನರನ್ನು ಖುಲಾಸೆಗೊಳಿಸಿದೆ.
2007ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 18 ದೋಷಿಗಳ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ.  ಈ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯಕ್ಕೆ ಇಬ್ಬರು ಆರೋಪಿಗಳನ್ನು ಮಾತ್ರ ಇಂದು ಹಾಜರುಪಡಿಸಲಾಗಿತ್ತು. ಉಳಿದ ಆರೋಪಿಗಳು ಬೆಂಗಳೂರು, ಅಹಮದಾಬಾದ್ ಮತ್ತು ಭೋಪಾಲ್ ಜೈಲುಗಳಲ್ಲಿದ್ದಾರೆ.
ಕೇರಳದ ವ್ಯಾಗಮೋನ್ ಪ್ರದೇಶದಲ್ಲಿ 11 ವರ್ಷಗಳ ಹಿಂದೆ ಸಿಮಿ ಸಂಘಟನೆಯಿಂದ ರಹಸ್ಯ ಶಸ್ತ್ರಾಸ್ತ್ರ ತರಬೇತಿಗಳನ್ನು ನೀಡಲಾಗುತ್ತದೆ ಎಂಬ ಪ್ರಕರಣ ಬಯಲಾಗುತ್ತಿದ್ದಂತೆ ಹಲವರನ್ನು ಬಂಧಿಸಲಾಗಿತ್ತು. ಕರ್ನಾಟಕ, ಮಧ್ಯಪ್ರದೇಶ ಮತ್ತು ಗುಜರಾತ್‍ನಲ್ಲಿ ಈ ಶಿಬಿರಗಳನ್ನು ನಡೆಸಲಾಗುತ್ತಿತ್ತು ಎಂದು ಎನ್‍ಐಎ ಆರೋಪಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ