ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ: ಬೆಚ್ಚಿಬಿದ್ದ ಗ್ರಾಮಸ್ಥರು

ಪಾವಗಡ,ಮೇ14- ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯಿಂದ ವಿವಿಧ ಗ್ರಾಮಗಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಗ್ರಾಮಗಳಾದ ಪಳವಳ್ಳಿ , ಪೆÇನ್ನಸಮುದ್ರ, ದೊಡ್ಡಹಳ್ಳಿ,ಕೆ.ರಾಂಪುರ ಸೇರಿದಂತೆ ಆಂಧ್ರ ಗಡಿಭಾಗದ ಹಳ್ಳಿಗಳಲ್ಲಿ ವದಂತಿ ಹಬ್ಬಿರುವುದರಿಂದ ರಾತ್ರಿ ಇಡೀ ನಿದ್ದೆಗೆಟ್ಟು ಪೆÇೀಷಕರು ಮಕ್ಕಳನ್ನು ಕಾಯುತ್ತಿದುದು ಕಂಡುಬಂತು.
ವಾಟ್ಸಪ್ ಮತ್ತು ಫೇಸಬುಕ್‍ಗಳಲ್ಲಿ ಮಕ್ಕಳನ್ನು ಅಪಹರಿಸಿ ಅಂಗಾಂಗಳನ್ನು ಕತ್ತರಿಸುತ್ತಿರುವ ದೃಶ್ಯ ವೈರಲ್ ಆಗಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಈ ನಡುವೆ ದೊಡ್ಡಹಳ್ಳಿಯಲ್ಲಿ ಪ್ರಿಯಾಂಕ(25) ಎಂಬಾಕೆಯನ್ನು ಅಪಹರಿಸಲಾಗಿದೆ ಎಂಬ ದೂರು ಈ ವದಂತಿಗೆ ಪುಷ್ಠಿ ನೀಡುವಂತಿದೆ.
ಪಾವಗಡ ಆಂಧ್ರಪ್ರದೇಶದ ಗಡಿಭಾಗವಾಗಿದ್ದು , ಆಂಧ್ರಪ್ರದೇಶದಿಂದ ಭಿಕ್ಷುಕರ ವೇಷದಲ್ಲಿ ಕರ್ನಾಟಕಕ್ಕೆ ಬಂದಿದ್ದಾರೆಂಬ ವದಂತಿ ಎಲ್ಲೆಡೆ ಹಬ್ಬಿರುವುದರಿಂದ ಪೆÇೀಷಕರು ಆತಂಕಗೊಂಡಿದ್ದಾರೆ.
ಆತಂಕಪಡುವ ಅಗತ್ಯವಿಲ್ಲ: ಜಿಲ್ಲಾಪೆÇಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಗೋಪಿನಾಥ್ ಮಾತನಾಡಿ, ಪಾವಗಡ ತಾಲ್ಲೂಕಿನ ಗಡಿಭಾಗಗಳಲ್ಲಿ ಮಕ್ಕಳನ್ನು ಅಪಹರಿಸಿ ಅಂಗಾಂಗಗಳನ್ನು ಕತ್ತರಿಸುತ್ತಿರುವ ದೃಶ್ಯಗಳನ್ನು ಕಿಡಿಗೇಡಿಗಳು ವಾಟ್ಸಪ್ ಹಾಗೂ ಫೇಸ್‍ಬುಕ್‍ಗಳಲ್ಲಿ ಹರಿಬಿಟ್ಟು ಜನರನ್ನು ಆತಂಕಕ್ಕೀಡು ಮಾಡುತ್ತಿದ್ದಾರೆ. ಆ ದೃಶ್ಯಾವಳಿಗಳು ಜನರನ್ನು ಹೆದರಿಸುವ ತಂತ್ರಗಳಾಗಿವೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ.
ದೊಡ್ಡಹಳ್ಳಿಯಲ್ಲಿ ಯುವತಿ ಅಪಹರಣವಾಗಿರುವ ಬಗ್ಗೆ ಸ್ಥಳೀಯ ಪೆÇಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಮಕ್ಕಳ ಅಪಹರಣ ವದಂತಿ ಸಂಬಂಧ ಹೊರರಾಜ್ಯದ ಪೆÇಲೀಸ್ ಅಧಿಕಾರಿಗಳ ಜೊತೆಯೂ ಚರ್ಚೆ ನಡೆಸಿದ್ದೇನೆ. ಆಂಧ್ರಪ್ರದೇಶದ ಪೆÇಲೀಸ್ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸುವುದಾಗಿ ಹೇಳಿದರು.
ತಿರುಮಣಿ, ವೈ.ಎನ್. ಹೊಸಕೋಟೆ ಪೆÇಲೀಸ್ ಠಾಣೆಗಳಿಗೆ ಈ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಮಕ್ಕಳ ಅಪಹರಣದ ಬಗ್ಗೆ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಈ ವದಂತಿ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ನಾಲ್ವರು ಮಹಿಳೆಯರಿಗೆ ಥಳಿತ:
ಬಳ್ಳಾರಿಯ ಸಂಗನಕಲ್ ಗ್ರಾಮದಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು ನಾಲ್ವರು ಮಹಿಳೆಯರು ಸೇರಿ ಐದು ಮಂದಿಗೆ ಮನಬಂದಂತೆ ಥಳಿಸಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಪೆÇಲೀಸರು ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ