ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ:

ಚಿಂತಾಮಣಿ,ಮೇ14- ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದು 6 ಮಂದಿಗೆ ಗಾಯಗೊಂಡಿರುವ ಘಟನೆ ತಾಲೂಕಿನ ಬಟ್ಲಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯ ಎಸಗಲ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡವರನ್ನು ರಾಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಯರ್‍ಲೆಸ್ ವೆಂಕಟ ರವಣಪ್ಪ (65) ಮತ್ತು ಮಗ ಶಿವಾ (28) ಹಾಗೂ ಚಂದ್ರಪ್ಪ (65) ಪತ್ನಿ ರವಣಮ್ಮ (55), ಅಳಿಯಾ ಶಂಕರಪ್ಪ (35) ಮತ್ತು ಶಂಕರಪ್ಪನ ಪತ್ನಿ ರಶ್ಮಿ (28) ಎಂದು ಗುರುತಿಸಲಾಗಿದೆ.
ತಲೆಗೆ ತೀವ್ರ ಪೆಟ್ಟುಬಿದ್ದು ಗಾಯಗೊಂಡಿರುವ ಪಿಯರ್‍ಲೆಸ್ ವೆಂಕಟರವಣಪ್ಪ ಮತ್ತು ಮಗ ಶಿವಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೆಂಕಟರವಣಪ್ಪ ಮಾಜಿ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದರೆ ತಮ್ಮ ಚಂದ್ರಪ್ಪ ಹಾಲಿ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರಿಗೂ ಹಳೇ ವೈಷ್ಯಮದ ಜೊತೆಗೆ ರಾಜಕೀಯ ವೈಷ್ಯಮ್ಯವಿದ್ದು, ನಿನ್ನೆ ಚಂದ್ರಪ್ಪರವರ ಮನೆಯ ಬಳಿ ನಿಲ್ಲಿಸಿದ್ದು, ಕಾರು ತೆಗೆ ಯುವ ವಿಚಾರವಾಗಿ ಚಂದ್ರಪ್ಪನ ಮಗ ನಾಗೇಶ್ ಮತ್ತು ವೆಂಕಟರವಣಪ್ಪನವರ ಮಗ ಶಿವಾ ನಡುವೆ ಮಾತಿನ ಚಕಿಮಕಿ ನಡೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಈ ಹಂತದಲ್ಲಿ ನಂತರ ಎರಡು ಕುಟುಂಬಗಳ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದಾರೆ. ಎರಡೂ ಗುಂಪಿನವರು ಗಾಯಗೊಂಡಿದ್ದು, ಈ ಪೈಕಿ ಕೆಲವರು ತೀವ್ರ ರಕ್ತಗಾಯಗಳಾಗಿ ರಕ್ತದಮಡುವಿನಲ್ಲಿ ಬಿದ್ದಿದ್ದರು. ಇದನ್ನು ಕಂಡ ಅಕ್ಕಪಕ್ಕದವರು ಗಾಯಾಳುಗಳನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಬಟ್ಲಹಳ್ಳಿ ಪೆÇಲೀಸರು ಸ್ಥಳಕ್ಕೆ ತೆರಳಿ ಘಟನೆಯ ಬಗ್ಗೆ ಮಾಹಿತಿ ಪಡೆದು ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ