ಸಚಿವ ಅರುಣ್ ಜೇಟ್ಲಿಗೆ ಮೂತ್ರಪಿಂಡ ಕಸಿ ಚಿಕಿತ್ಸೆ:

ನವದೆಹಲಿ, ಮೇ 14-ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ದೆಹಲಿಯ ಅಲ್ ಇಂಡಿಯಾ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಎಐಐಎಂಎಸ್) ಆಸ್ಪತ್ರೆಯಲ್ಲಿ ಇಂದು ಮೂತ್ರಪಿಂಡ ಕಸಿ(ಕಿಡ್ನಿ ಟ್ರಾನ್ಸ್‍ಪ್ಲಾಂಟ್) ಶಸ್ತ್ರಚಿಕಿತ್ಸೆಗೆ ಒಳಗಾದರು.
65 ವರ್ಷದ ಜೇಟ್ಲಿ ಅವರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 8 ಗಂಟೆಯಲ್ಲಿ ಅವರನ್ನು ಆಪರೇಷನ್ ಥಿಯೇಟರ್‍ಗೆ ಕರೆದೊಯ್ಡು ಶಸ್ತ್ರಕ್ರಿಯೆ ನಡೆಸಲಾಯಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಜೇಟ್ಲಿ ಕಳೆದ ಒಂದು ತಿಂಗಳಿನಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರುಣ್ ಜೇಟ್ಲಿ ಅವರ ಕುಟುಂಬ ಸ್ನೇಹಿತ, ಏಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರ ಸಹೋದರ ಮತ್ತು ಅಪೆÇಲೋ ಆಸ್ಪತ್ರೆಯ ಮೂತ್ರಪಿಂಡ ರೋಗ ತಜ್ಞ(ನೆಫೆÇ್ರೀ ಡಾ. ಸಂದೀಪ್ ಗುಲೇರಿಯಾ ಅವರನ್ನೂ ಒಳಗೊಂಡ ವೈದ್ಯರ ತಂಡ ಈ ಕಸಿ ಶಸ್ತ್ರಚಿಕಿತ್ಸೆ ನಡೆಸಿದೆ.
ಅನಾರೋಗ್ಯದ ಕಾರಣದಿಂದಾಗಿ ಮುಂದಿನ ವಾರ ಲಂಡನ್‍ನಲ್ಲಿ ನಡೆಯಲಿರುವ 10ನೇ ಭಾರತ-ಇಂಗ್ಲೆಂಡ್ ಆರ್ಥಿಕ ಮತ್ತು ಹಣಕಾಸು ಸಮಾವೇಶದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಜೇಟ್ಲಿ ಇತ್ತೀಚೆಗೆ ಟ್ವಿಟ್‍ನಲ್ಲಿ ತಿಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ