
ಬೆಂಗಳೂರು, ಮೇ 14- ಶಾಂತಿಯುತ ಮತದಾನಕ್ಕೆ ಸಹಕರಿಸಿದ ರಾಜ್ಯದ ಎಲ್ಲಾ ಜನತೆ, ಚುನಾವಣಾ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಎಂಇಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ನೌಹೀರಾ ಶೇಕ್ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಎಂಇಪಿ ಪಕ್ಷ ರಾಜ್ಯದ ಜನತೆಯಲ್ಲಿ ಹೊಸ ಸಂಚಲನ ಮೂಡಿಸಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ನೀಡಲು ಕಾರಣರಾದ ಮತದಾರರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು ಎಂದರು.
ಸೋಲು-ಗೆಲುವು ಎಂದಿಗೂ ನಮ್ಮ ಅಧೀರರನ್ನಾಗಿ ಮಾಡುವುದಿಲ್ಲ. ಫಲಿತಾಂಶ ಏನೇ ಬರಲಿ ಪಕ್ಷ ಸಂಘಟಿಸಿ ಭದ್ರ ಬುನಾದಿಹಾಕಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪಿಸಿ ಕನ್ನಡಿಗರ ಹೃದಯದಲ್ಲಿ ನೆಲೆಸುವವರೆಗೂ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.
ಮುಂದೆಯೂ ಇದೇ ರೀತಿ ಪಕ್ಷಕ್ಕೆ ಸಹಕಾರ ದೊರೆಯಲಿದೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ನೌಹೀರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.