
ಹುಬ್ಬಳ್ಳಿ, ಮೇ 14- ಇಲ್ಲಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರನ್ನು ಸಿಬಿಐ ಬಂಧಿಸಿದೆ.
50,000 ಲಂಚ ಪಡೆದ ಆರೋಪದಡಿ ಸಿದ್ಧಾರೂಢ ಮೆಕ್ರೇ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಇಂದು ಸಿಬಿಐ ಅಧಿಕಾರಿಗಳ ತಂಡ ಅವರನ್ನು ಬಂಧಿಸಿದೆ ಎಂದು ಹೇಳಲಾಗಿದೆ.
ನಾಲ್ಕನೆ ತರಗತಿಯ ಪ್ರವೇಶಕ್ಕಾಗಿ ಬಸವರಾಜ್ ಸಣ್ಣ ಪೂಜಾರ್ ಎಂಬುವರಿಂದ 50,000 ರೂ. ಲಂಚ ಕೇಳಿದ್ದರು. ಈ ಸಂಬಂಧ ಅವರು ಸಿಬಿಐಗೆ ದೂರು ನೀಡಿದ್ದರು.
ಈ ಸಂಬಂಧ ನಿನ್ನೆಯಷ್ಟೇ ದೂರು ದಾಖಲಾಗಿತ್ತು. ಇಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ಸಿಬಿಐ ತಂಡ ಸಿದ್ದಾರೂಢ ಅವರನ್ನು ವಶಕ್ಕೆ ಪಡೆದಿದೆ.