ಪ್ಯಾರಿಸ್, ಮೇ 13-ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಿನ್ನೆ ಮತ್ತೆ ಅಟ್ಟಹಾಸ ಮೆರೆದ ಉಗ್ರನೊಬ್ಬ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಕೊಂದು ಇತರ ನಾಲ್ವರನ್ನು ಗಾಯಗೊಳಿಸಿದ್ದಾನೆ. ನಂತರ ಹಂತಕನನ್ನು ಪೆÇಲೀಸರು ಹೊಡೆದುರುಳಿಸಿದ್ದಾರೆ.
ವಾರಾಂತ್ಯದ ದಿನವಾದ ಶನಿವಾರ ಪ್ಯಾರಿಸ್ನ ಮುಖ್ಯ ಅಪೇರಾ ಹೌಸ್ ಬಳಿ ಈ ಘಟನೆ ನಡೆದಿದೆ. ಬಾರ್ಗಳು, ರೆಸ್ಟೋರೆಂಟ್ಗಳು ಮತ್ತು ಥಿಯೇಟರ್ಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಉಗ್ರನೊಬ್ಬ ಅಲ್ಲಾಹು ಅಕ್ಬರ್ (ದೇವರು ದೊಡ್ಡವನು) ಎಂದು ಜೋರಾಗಿ ಕೂಗುತ್ತಾ ಗುಂಪಿನ ಮೇಲೆ ದಾಳಿ ನಡೆಸಿ ಸಿಕ್ಕಸಿಕ್ಕವರಿಗೆ ಚೂರಿಯಿಂದ ಇರಿದ. ಈ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಇತರ ನಾಲ್ವರು ತೀವ್ರ ಗಾಯಗೊಂಡರು.
ಈ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಫ್ರಾನ್ಸ್ ಪೆÇಲೀಸರು ಗುಂಡು ಹಾರಿಸಿ ಉಗ್ರಗಾಮಿಯನ್ನು ಕೊಂದರು. ಉಗ್ರಗಾಮಿ ದಾಳಿಯನ್ನು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರೋನ್ ಖಂಡಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ.