ಎಕೆ-47 ಬುಲೆಟ್‍ಗಳಿಂದಲೂ ರಕ್ಷಣೆ ನೀಡುವ ಜಾಕೆಟ್‍!

ನವದೆಹಲಿ, ಮೇ 13- ಎಕೆ-47(ಅವತೋಮತ್ ಕಲಾಶ್ನಿಕೋವ್-1947) ರೈಫಲ್ ಬುಲೆಟ್‍ಗಳಿಂದಲೂ ರಕ್ಷಣೆ ನೀಡುವ ಸಾಮಥ್ರ್ಯವುಳ್ಳ ಗುಂಡು ಪ್ರತಿರೋಧಕ ಜಾಕೆಟ್‍ಗಳು ಶೀಘ್ರವೇ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಒಂದು ಲಕ್ಷ ಯೂನಿಟ್ ಜಾಕೆಟ್‍ಗಳನ್ನು ನೀಡಲಾಗುತ್ತದೆ.
ಎಕೆ-47 ರೈಫಲ್‍ನಿಂದ ಚಿಮ್ಮುವ ಗುಂಡುಗಳು ಅತ್ಯಂತ ಅಪಾಯಕಾರಿ ಬುಲೆಟ್‍ಗಳಾಗಿದ್ದು, ಇವುಗಳಿಂಲೂ ರಕ್ಷಣೆ ನೀಡಬಲ್ಲ ಬುಲೆಟ್ ಪ್ರೂಫ್ ಜಾಕೆಟ್‍ಗಳು ಶೀಘ್ರವೇ ಯೋಧರಿಗೆ ದೊರೆಯಲಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಡಿಎಂಎಸ್‍ಆರ್‍ಡಿಇ ಸಂಸ್ಥೆಯಿಂದ ಭಾರತದಲ್ಲೇ ಗುಂಡು ನಿರೋಧಕ ಜಾಕೆಟ್‍ಗಳು ತಯಾರಾಗಿದೆ. ಐದು ವರ್ಷಗಳ ನಿರಂತರ ಸಂಶೋಧನೆ ನಂತರ ಈ ಬುಲೆಟ್ ಪ್ರೂಫ್ ವಿಶೇಷ ವಸ್ತ್ರವನ್ನು ಘಾತುಕ ಪ್ರತಿರೋಧಕವಾಗಿ ವಿನ್ಯಾಸಗೊಳಿಸಲಾಗಿದೆ.
ಯೋಧರ ಕುತ್ತಿಗೆ, ಎದೆ ಹಾಗೂ ತೊಡೆ ಭಾಗಗಳಿಗೂ ಈ ಗುಂಡು ನಿರೋಧಕ ಜಾಕೆಟ್ ರಕ್ಷಣೆ ನೀಡಲಿದೆ. ತೀರಾ ಹತ್ತಿರದಿಂದ ಎಕೆ-47 ರೈಫಲ್‍ನಿಂದ ಗುಂಡು ಹಾರಿಸಿದರೂ ಯೋಧರಿಗೆ ಮರಣಾಂತಿಕ ಗಾಯಗಳು ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ