ಹುಬ್ಬಳ್ಳಿ, ಮೇ 12- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಫೆÇೀನ್ ಮಾಡಿ ಬೆದರಿಕೆ ಹಾಕಲಾದ ಆಡಿಯೋ ಈಗ ಬಯಲಾಗಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.
ಗೋಪಾಲ ಕುಲಕರ್ಣಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಇದೇ ಕ್ಷೇತ್ರದಲ್ಲಿ 18 ಸಾವಿರಕ್ಕೂ ಹೆಚ್ಚು ಮತದಾರರಿದಾರೆ. ಹಾಗಾಗಿ ಸಹಜವಾಗಿಯೇ ಕುಲಕರ್ಣಿ ಪರವಾಗಿ ಒಳ್ಳೇ ಸ್ಪಂದನೆ ಸಿಗುತ್ತಿದೆ. ಬರೀ ಬ್ರಾಹ್ಮಣ ಮತದಾರರಷ್ಟೇ ಅಲ್ಲ, ಬೇರೆಯವರನ್ನು ಸೆಳೆಯುವಲ್ಲಿ ಗೋಪಾಲ ಯಶಸ್ವಿಯಾಗಿದ್ದು, ವಿರೋಧಿಗಳಲ್ಲಿ ಆತಂಕ ಹೆಚ್ಚಾಗಿದೆ.
ಇದೇ ಹಿನ್ನೆಲೆಯಲ್ಲಿ ಇವತ್ತು ತಾನು ಬ್ರಾಹ್ಮಣ ಅಂತ ಹೇಳಿಕೊಂಡು ಅನಾಮಿಕನೊಬ್ಬ ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿಗೆ ಫೆÇೀನ್ ಮಾಡಿ ಬೆದರಿಕೆ ಹಾಕಿದ್ದಾನೆ.
ನೀನೊಬ್ಬ ಬ್ರಾಹ್ಮಣನಾಗಿದ್ದು, ಹಣ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದೀಯಾ. ನಿನಗೆ ಆ ರಾಘವೇಂದ್ರ ಸ್ವಾಮಿ ಒಳ್ಳೆಯದನ್ನು ಮಾಡುವುದಿಲ್ಲ. ನಂಬಿದವರಿಗೆ ಮೋಸ ಮಾಡಿದ್ದೀಯಾ ಎಂದು ಮಾತನಾಡಿದ ಆ ವ್ಯಕ್ತಿ, ಮುಂದೆ ನೀನು ಇದಕ್ಕಾಗಿ ತಕ್ಕ ಬೆಲೆ ತೆರುತ್ತೀಯಾ ಎಂದು ಬೆದರಿಕೆ ಹಾಕಿ, ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದಾನೆ.
ನಿನ್ನೆ ಮಧ್ಯರಾತ್ರಿ 12ಗಂಟೆ 15 ನಿಮಿಷಕ್ಕೆ ಈ ಬೆದರಿಕೆ ಕರೆ ಮಾಡಿದ್ದಾನೆ. ಇನ್ನೂ 3 ನಿಮಿಷ 11 ಸೆಕೆಂಡ್ಗಳ ಈ ಆಡಿಯೋ ಈಗ ವೈರಲಾಗುತ್ತಿದ್ದೂ ತಾವು ಪ್ರಬಲ ಸ್ಪರ್ಧೆಯೊಡ್ಡುತ್ತಿರುವುದರಿಂದಾಗಿ ಬಿಜೆಪಿ ನಾಯಕರಿಂದ ನಿರಂತರ ಒತ್ತಡ ಕೂಡ ಬಂದಿತ್ತು ಎಂದು ಗೋಪಾಲ ಕುಲಕರ್ಣಿ ಹೇಳಿದ್ದಾರೆ.
ಕ್ಷೇತ್ರದಲ್ಲಿನ 18ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಮತಗಳು ಬಹುಪಾಲು ಬಿಜೆಪಿಯ ಸಾಂಪ್ರದಾಯಿಕ ಮತಗಳಾಗಿದ್ದು ಇವು ಚದುರಿ ಹೋದರೆ ಮಾಜಿ ಸಿಎಂ ಗೆಲುವು ಕಷ್ಟವಾಗುತ್ತೆ ಎಂಬ ಕಾರಣಕ್ಕೆ ಬೆದರಿಕೆ ಕರೆ ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಹಿಂದೆಯೂ ಗೋಪಾಲ ಬೆಂಬಲಿಗರಿಗೂ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಗೋಪಾಲ ಕುಲಕರ್ಣಿ ಈಗ ಅಶೋಕನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.