ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ:

ಮೈಸೂರು, ಮೇ 12-ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ನಡೆದಿದೆ ಎನ್ನಲಾಗಿದೆ.
ಮತಗಟ್ಟೆ ಸಂಖ್ಯೆ 112ರಲ್ಲಿ ನಕಲಿ ಮತದಾನ ನಡೆದಿದೆ ಎನ್ನಲಾಗಿದ್ದು, ಆಗ್ರಹಾರದ ರೇಣುಕಾಚಾರ್ಯ ದೇವಾಲಯ ರಸ್ತೆ ವಾಸಿ ವರಲಕ್ಷ್ಮಿಎಂಬುವರು ಮತಗಟ್ಟೆ 112ರಲ್ಲಿ ಮತದಾನ ಮಾಡಲು ಬಂದಾಗ ಈಗಾಗಲೇ ಅವರ ಮತದಾನ ನಡೆದಿದೆ ಎಂದಿದ್ದಾರೆ.
ಆದರೆ ವರಲಕ್ಷ್ಮಿ ಇನ್ನು ಮತದಾನ ಮಾಡದಿದ್ದರೂ ಅವರ ಹೆಸರಿನಲ್ಲಿ ಬೇರೊಬ್ಬರು ಮತ ಚಲಾಯಿಸಿದ್ದನ್ನು ತಿಳಿದು ಅಸಮಾಧಾನಗೊಂಡು ತೆರಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ