ಒಂದೇಕುಟುಂಬದ ತಾಯಿ ಶಾರದಮ್ಮ ಹಾಗೂ ಮಗ-ಸೊಸೆ ಹಾಗೂ ಮಗಳು ಒಟ್ಟಿಗೆ ಆರಂಭದಲ್ಲಿಯೇ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು. ೯೬ ವರ್ಷದ ಶಾರದಮ್ಮ, ೭೬ ವರ್ಷದ ಮಗ, ೭೧ ವರ್ಷದ ಮಗಳು, ೬೯ ವರ್ಷದ ಸೊಸೆ ಒಟ್ಟಿಗೆ ಆಗಮಿಸಿ ಮತಚಲಾಯಿಸಿದರು.
ಆದರೆ ಪ್ರಸಕ್ತ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪ್ರಜಾಪ್ರಭುತ್ವದಲ್ಲಿ ಸುಧಾರಣೆ ಕುಂಟಿತವಾಗಿದ್ದು, ಅತ್ಯಂತ ನಿಧಾನಗತಿಯಲ್ಲಿದೆ ಎಂದು ತೀವ್ರ ವಿಷಾಧ ವ್ಯಕ್ಯ್ತಪಡಿಸಿದರು. ನಮ್ಮ ರಾಜಕೀಯ ಪಕ್ಷಗಳ, ನಾಯಕರ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.
ಇದೇವೇಳೆ ಪ್ರಜಾಪ್ರಜಾಪ್ರಭುತ್ವದ ಸದುಪಯೋಗವಾಗಲಿಲ್ಲ ಎಂದು ಈ ಹಿರಿಯ ಮತದಾರರು ತಮ್ಮ ಜೀವನಾವಧಿಯ ಮತದಾನವನ್ನು ನೆನಪಿಸಿಕೊಂಡು ತೀವ್ರ ಬೇಸರ ವ್ಯಕ್ತಪಡಿಸಿದರು.