ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಇವಿಯಂ ನಲ್ಲಿ ತಾಂತ್ರಿಕ ದೋಷ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ ಚಲಾವಣೆಗೆ ಬಂದಾಗ ತೊಂದರೆ

ಹಾಸನ:ಮೇ-12: ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ಉತ್ಸಾಹದಿಂದ ಸಾಗುತ್ತಿದೆ. ಹಾಸನದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್‌ ಡಿ ದೇವೇಗೌಡರು ಮತ ಚಲಾಯಿಸಲು ಬಂದ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.

ದೇವೇಗೌಡರು ಮತಚಲಾಯಿಸಲೆಂದು ಪಡುವಲಹಿಪ್ಪೆ ಮತಗಟ್ಟೆಗೆ ಆಗಮಿಸಿದ್ದಾರೆ. ಈ ವೇಳೆ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಹೊಳೆನರಸೀಪುರ ತಾಲೂಕು ಮತಗಟ್ಟೆ ಸಂಖ್ಯೆ 197 ರಲ್ಲಿ ಘಟನೆ ನಡೆದಿದೆ.

ಪ್ರತಿ 15 ಮಂದಿ ಮತದಾನಕ್ಕೆ ದೋಷ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇವಿಎಂಯನ್ನು ಮತದಾನ ಕೇಂದ್ರ ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಒಂದೆಡೆ ಚುನಾವಣಾ ಸಿಬ್ಬಂದಿ ಮತಯಂತ್ರ ಬದಲಿಸುತ್ತಿದ್ದಾರೆ. ಇನ್ನೊಂಡೆಡೆ ಮತದಾನಕ್ಕಾಗಿ ಜನ ಸಾಲುಗಟ್ಟಿ ನಿಂತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ