ಮತದಾರರು ಪರ್ಯಾಯ 12 ವಿಧದ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ

ಬೆಂಗಳೂರು, ಮೇ 11-ನಾಳೆ ರಾಜ್ಯ ವಿಧಾನಸಭೆಗೆ ನಡೆಯಲಿರುವ ಮತದಾನದ ವೇಳೆ ಮತದಾರರು ಪರ್ಯಾಯ 12 ವಿಧದ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತ ಚಲಾಯಿಸಲು ಭಾರತದ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿಗೆ ಬದಲಾಗಿ ಪಾಸ್‍ಪೆÇೀರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಮತ್ತು ರಾಜ್ಯ ಸರ್ಕಾರ, ಅರೆಸರ್ಕಾರಿ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು, ಕಂಪೆನಿಗಳು, ತಮ್ಮ ಸಿಬ್ಬಂದಿಗೆ ನೀಡಿರುವ ಫೆÇೀಟೋ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯ ಫೆÇೀಟೋವುಳ್ಳ ಪಾಸ್‍ಬುಕ್, ಪಾನ್‍ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ನೀಡಿರುವ ಸ್ಮಾರ್ಟ್‍ಕಾರ್ಡ್, ನರೇಗಾ ಉದ್ಯೋಗ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್‍ಕಾರ್ಡ್, ಫೆÇೀಟೋವುಳ್ಳ ಪಿಂಚಣಿ ದಾಖಲೆ, ಚುನಾವಣಾ ಆಯೋಗ ನೀಡಿರುವ ದೃಢೀಕೃತ ಫೆÇೀಟೋ ವೋಟರ್‍ಸ್ಲಿಪ್, ಸಂಸದರು, ಶಾಸಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಆಧಾರ್ ಕಾರ್ಡ್‍ಗಳನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.

ಮತದಾರರು ಮತಗಟ್ಟೆಗಳಲ್ಲಿ ಮತದಾನ ಮಾಡುವ ಮುನ್ನ ತಮ್ಮ ಗುರುತನ್ನು ಖಾತರಿಪಡಿಸಲು ಮತದಾರರ ಗುರುತಿನ ಚೀಟಿ, ಇಲ್ಲವೇ ಈ ಮೇಲಿನ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು.
ಒಂದು ವೇಳೆ ಮತದಾರರ ಗುರುತಿನ ಚೀಟಿಯಲ್ಲಿ ದೋಷವಿದ್ದು, ವ್ಯಕ್ತಿಯ ಭಾವಚಿತ್ರ ಹೊಂದಾಣಿಕೆಯಾಗದಿದ್ದ ಪಕ್ಷದಲ್ಲಿ ಈ 12 ದಾಖಲಾತಿಗಳಲ್ಲಿ ಯಾವುದಾದರೊಂದನ್ನು ತೋರಿಸಿ ಮತ ಚಲಾಯಿಸಲು ಆಯೋಗ ಅವಕಾಶ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ