ನವದೆಹಲಿ, ಮೇ 11- ಬಾಲಿವುಡ್ ಅಭಿನೇತ್ರಿ ಶ್ರೀದೇವಿ ಸಾವು ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇದು ವಜಾಗೊಳಿಸಿದೆ.
ಹಿರಿಯ ತಾರೆ ಶ್ರೀದೇವಿ ಸಾವಿನ ಬಗ್ಗೆ ಅನುಮಾನ ಮತ್ತು ಗೊಂದಲಗಳಿವೆ. ಈ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸಬೇಕೆಂದು ಸುನಿಲ್ ಸಿಂಗ್ ಎಂಬುವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಕೋರಿಕೆಯನ್ನು ವಜಾಗೊಳಿಸಿತು.
ದುಬೈನ್ ಪಂಚಾತಾರ ಹೋಟೆಲ್ನ ಬಾತ್ಟಬ್ನಲ್ಲಿ ಆಕಸ್ಮಿಕವಾಗಿ ಬಿದ್ದು, ಫೆ.24ರಂದು ಶ್ರೀದೇವಿ ಮೃತಪಟ್ಟಿದ್ದರು. ಈ ಸಂಬಂಧ ತನಿಖೆಗೆ ಕೋರಿ ಸುನಿಲ್ ಸಿಂಗ್ ಮಾ. 9ರಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ಬಗ್ಗೆ ಭಾರತ ಮತ್ತು ದುಬೈ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂಬ ಕಾರಣ ನೀಡಿ ನ್ಯಾಯಾಲಯದ ಈ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿತ್ತು.