
ರಾಯಚೂರು, ಮೇ 11-ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಕಾಂಚಾಣ ಹರಿದಾಡುತ್ತಿದ್ದು, ಜಿಲ್ಲೆಯ ದೇವದುರ್ಗದಲ್ಲಿ ನಕಲಿ ನೋಟುಗಳ ಚಲಾವಣೆ ನಡೆಯುತ್ತಿರುವುದು ಪತ್ತೆಯಾಗಿದೆ.
ಚುನಾವಣೆಯನ್ನು ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದು, 500 ರೂ. ಮುಖಬೆಲೆಯ ನೋಟುಗಳು ಹರಿದಾಡುತ್ತಿವೆ.
ಜಿಲ್ಲೆಯ ಜಾಲಹಳ್ಳಿಯ ಪೆಟ್ರೋಲ್ ಬಂಕ್ವೊಂದರಲ್ಲಿ 500 ಮುಖಬೆಲೆಯ 3 ನೋಟುಗಳು ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧೆಡೆ ನಕಲಿ ನೋಟುಗಳು ಪತ್ತೆಯಾಗುತ್ತಿವೆ. ಮತದಾರರಿಗೆ ಹಂಚಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಕಲಿ ನೋಟುಗಳನ್ನು ಪತ್ತೆಯಾದ ಕಡೆ ಅವುಗಳನ್ನು ಬ್ಯಾಂಕ್ ಸಿಬ್ಬಂದಿ ಅಲ್ಲೇ ಸುಟ್ಟು ಹಾಕುತ್ತಿದ್ದಾರೆ.
ಹಾಗಾಗಿ ಬಹುತೇಕ ಪೆಟ್ರೋಲ್ಬಂಕ್, ಡಾಬಾಗಳಲ್ಲಿ ಐನೂರು ರೂಪಾಯಿಯ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಪ್ರಾಮಾಣಿಕ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.