
ವಾಷಿಂಗ್ಟನ್: ಮೇ-11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವಿನ ಐತಿಹಾಸಿಕ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದೆ.
ಇದೇ ಜೂನ್ 12ರಂದು ಸಿಂಗಾಪುರದಲ್ಲಿ ತಾವು ಭೇಟಿಯಾಗಲಿದ್ದು, ಕೊರಿಯಾ ಪರ್ಯಾಯ ದ್ವೀಪದ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಕುರಿತು ಚರ್ಚಿಸಲಿದ್ದೇವೆ. ಇದು ವಿಶ್ವಶಾಂತಿಯ ನಿಟ್ಟಿನಲ್ಲಿ ಇಡಲಾಗುವ ವಿಶೇಷ ಹೆಜ್ಜೆ ಎಂದು ಸ್ವತಃ ಟ್ರಂಪ್ ಗುರುವಾರ ಟ್ವೀಟ್ ಮಾಡಿದ್ದಾರೆ.