ಮ್ಯಾನ್ಮಾರ್ ಗೆ ತೆರಳಿದ ಸುಷ್ಮಾ ಸ್ವರಾಜ್: ಉನ್ನತ ನಾಯಕರೊಂದಿಗೆ ಪ್ರಮುಖ ದ್ವಿಪಕ್ಷೀಯ ಮಾತುಕತೆ

ನೇ ಪೀ ತಾವ್‌ : ಮೇ-11: ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ ಅವರು ಎರಡು ದಿನಗಳ ಭೇಟಿ ಹಿನ್ನಲೆಯಲ್ಲಿ ಮ್ಯಾನ್ಮಾರ್‌ಗೆ ತೆರಳಿದ್ದಾರೆ.

ಈ ಭೇಟಿಯಲ್ಲಿ ಸಚಿವೆ ಸುಶ್ಮಾ ಅವರು ಮ್ಯಾನ್ಮಾರ್‌ನ ಉನ್ನತ ನಾಯಕರೊಂದಿಗೆ ಪ್ರಮುಖ ದ್ವಿಪಕ್ಷೀಯ, ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಅಲ್ಲದೇ ವಿಶೇಷವಾಗಿ ರಖೈನ್‌ನಿಂದ ಭಾರತಕ್ಕೆ ಬರುತ್ತಿರುವ ಸಹಸ್ರಾರು ರೊಹಿಂಗ್ಯಾ ಮುಸ್ಲಿಮರ ಸಮಸ್ಯೆಯ ಬಗ್ಗೆ ಚರ್ಚಿಸಲಿದ್ದಾರೆ.

ನೇ ಪೀ ತಾವ್‌ಗೆ ಸುಶ್ಮಾ ಅಗಮಿಸಿದ ಹಿ ನ್ನಲೆಯಲ್ಲಿ ಸಚಿವರನ್ನು ಭಾರತೀಯ ರಾಯಭಾರಿ ವಿಕ್ರಮ್‌ ಮಿಶ್ರಿ ಮತ್ತು ಮ್ಯಾನ್ಮಾರ್‌ನ ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿನ ಶಾಶ್ವತ ಕಾರ್ಯದರ್ಶಿ ಯು ಮಿಯಿಂಟ್‌ ತೂ ಸ್ವಾಗತಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ