
ಬೆಂಗಳೂರು, ಮೇ 10- ವಿಧಾನಸಭಾ ಚುನಾವಣೆ ಬಂದೋಬಸ್ತ್‍ಗಾಗಿ ನೆರೆಯ ರಾಜ್ಯಗಳಿಂದ ಪೆÇಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ.
ಚುನಾವಣಾ ಭದ್ರತೆಗಾಗಿ ನೆರೆಯ ರಾಜ್ಯಗಳಾದ ಗೋವಾ, ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಪೆÇಲೀಸರು ಆಗಮಿಸಿದ್ದಾರೆ.
ಈಗಾಗಲೇ 570 ಕಂಪೆನಿ ಕೇಂದ್ರ ಪಡೆಗಳು ರಾಜ್ಯಕ್ಕೆ ಬಂದಿವೆ. ಕೇಂದ್ರ ಪಡೆಗಳಲ್ಲಿ ಬಿಎಸ್‍ಎಫ್, ಆರ್‍ಪಿಎಫ್, ಐಟಿ ಬಿಟಿ, ಎಸ್‍ಎಸ್‍ಬಿ, ಸಿಆರ್‍ಪಿಎಫ್, ಸಿಐಎಸ್‍ಎಫ್ ಸೇರಿವೆ.
ಈ ಕೇಂದ್ರ ಪಡೆಗಳನ್ನು ವಿಧಾನಸಭಾ ಕ್ಷೇತ್ರಗಳಿಗೆ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದ್ದು, ಸ್ಥಳೀಯ ಪೆÇಲೀಸರ ಜತೆಗೆ ಡಿಎಆರ್, ಸಿಎಆರ್, ಕೆಎಸ್‍ಆರ್‍ಪಿ ಫ್ಲಟೂನ್‍ಗಳನ್ನು ಸಹ ನಿಯೋಜಿಸಲಾಗಿದೆ.