ಕಾಂಗೋ ಗಣರಾಜ್ಯದಲ್ಲಿ ಮತ್ತೆ ಮಾರಕ ಎಬೋಲಾ: 17 ಮಂದಿ ಮೃತ

ಕಿನ್‍ಶಾಸ, ಮೇ 10-ಕಾಂಗೋ ಗಣರಾಜ್ಯದಲ್ಲಿ ಮತ್ತೆ ಮಾರಕ ಎಬೋಲಾ ರೋಗ ಉಲ್ಬಣಗೊಂಡಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರಿಗೆ ರೋಗ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಇಕ್ವೆಟರ್ ರಾಜ್ಯದಲ್ಲಿ ಈವರೆಗೆ ಎಬೋಲಾಕ್ಕೆ 17 ಮಂದಿ ಬಲಿಯಾಗಿದ್ದು, 21 ಜನರು ಜ್ವರದಿಂದ ನರಳುತ್ತಿದ್ದಾರೆ ಎಂದು ಕಾಂಗೋ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಾಂಗೋದಲ್ಲಿ 1976ರ ನಂತರ ಎಬೋಲಾ ಉಲ್ಬಣಗೊಂಡಿರುವುದು ಒಂಭತ್ತನೇ ಬಾರಿ. ಚಿಕಿತ್ಸೆಯೇ ಇಲ್ಲದ ಅತ್ಯಂತ ಭಯಾನಕ ರೋಗವನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ನಿರಂತರ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ