
ನವದೆಹಲಿ, ಮೇ 10-ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಅನಿವಾಸಿ ಭಾರತೀಯರ (ಎನ್ಆರ್ಐ) ವಿಭಾಗದ ಮುಖ್ಯಸ್ಥೆಯಾಗಿ ಡಾ.ಆರತಿ ಕೃಷ್ಣ ನೇಮಕವಾಗಿದ್ದಾರೆ.
ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆಯ ಸಹ ಮುಖ್ಯಸ್ಥೆಯಾಗಿರುವ ಡಾ.ಆರತಿ ಕೆಪಿಸಿಸಿ ಎನ್ನಾರೈ ವಿಭಾಗ ಪ್ರಥಮ ಮುಖ್ಯಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನಿನ್ನೆ ಅರತಿ ಅವರಿಗೆ ಈ ನೇಮಕ ಪತ್ರವನ್ನು ನೀಡಿದ್ದಾರೆ.
ವಿಶ್ವಾದ್ಯಂತ ಇರುವ ಅನಿವಾಸಿ ಭಾರತೀಯರಲ್ಲಿ ಕಾಂಗ್ರೆಸ್ ಪಕ್ಷವನ್ನು ಜನಪ್ರಿಯತೆಗೊಳಿಸುವ ಉದ್ದೇಶದಿಂದ ಈ ಹೊಸ ವಿಭಾಗವನ್ನು ರಚಿಸಲಾಗಿದೆ. ನಾನು ಮುಖ್ಯಸ್ಥೆ ಹುದ್ದೆಯನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಲು ಬದ್ಧವಾಗಿದ್ದೇನೆ. ಪಕ್ಷವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೋಕಪ್ರಿಯಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.