ಕೊಡಗು, ಮೇ10- ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ್ದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯಲ್ಲೂ ಬಡಿದಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಸಂಬಂಧವಾಗಿ ಗೋಣಿಕೊಪ್ಪದ 3ನೇ ಬಡಾವಣೆಯಲ್ಲಿ ರಾತ್ರಿ ಪರಸ್ಪರ ಬಡಿದಾಡಿಕೊಂಡು ಗಾಯಗೊಂಡಿದ್ದ ಕಾರ್ಯಕರ್ತರು ರಾತ್ರಿಯೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಮತ್ತೆ ಹೊಡೆದಾಡಿದ್ದಾರೆ. ಕೈಗೆ ಸಿಕ್ಕ ಉಪಕರಣಗಳಿಂದ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ಆಸ್ಪತ್ರೆಯ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡಿದ್ದಾರೆ.
ಎರಡು ಪಕ್ಷಗಳ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡು ಸರ್ಕಾರಿ ಆಸ್ಪತ್ರೆಗೆ ಹಾನಿಯುಂಟು ಮಾಡಿರುವುದು ಕಾನೂನು ಪ್ರಕರಾರ ಅಪರಾಧವಾಗಿದ್ದು ಕ್ರಮ ಜರುಗಿಸುವಂತೆ ಪೆÇಲೀಸ್ ಠಾಣೆಗೆ ದೂರು ನೀಡಲಾಗಿದೆ.