ರಾಜ್ಯದ 20 ಅತಿಸೂಕ್ಷ್ಮವಿಧಾನಸಭಾ ಕ್ಷೇತ್ರಗಳು ಚುನಾವಣಾ ಆಯೋಗ ಘೋಷಣೆ

ಬೆಂಗಳೂರು, ಮೇ9-ರಾಷ್ಟ್ರದ ಗಮನಸೆಳೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ರಾಜ್ಯದ 20 ವಿಧಾನಸಭಾ ಕ್ಷೇತ್ರಗಳನ್ನು ಅತಿಸೂಕ್ಷ್ಮ ಕ್ಷೇತ್ರಗಳೆಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಅಭ್ಯರ್ಥಿಗಳು ಹೊಂದಿರುವ ಅಪರಾಧ ಪ್ರಕರಣ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳನ್ನು ಅತಿ ಸೂಕ್ಷ್ಮ ಕ್ಷೇತ್ರಗಳೆಂದು ಘೋಷಿಸಲಾಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.

ಇದರಲ್ಲಿ ಪ್ರಮುಖವಾಗಿ ಬಿಜೆಪಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿರುವ ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿದಿರುವ ರಾಮನಗರ, ಕಾಂಗ್ರೆಸ್‍ನ ಪ್ರಭಾವಿ ನಾಯಕ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರ, ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಶ್ರೀರಾಮುಲು ಕಣಕ್ಕಿಳಿದಿರುವ ಮೊಳಕಾಲ್ಮೂರು ಸೇರಿದಂತೆ ಒಟ್ಟು 20 ವಿಧಾನಸಭಾ ಕ್ಷೇತ್ರಗಳನ್ನು ಚುನಾವಣಾ ಆಯೋಗವು ಅತಿಸೂಕ್ಷ್ಮ ಕ್ಷೇತ್ರಗಳೆಂದು ಪರಿಗಣಿಸಿದೆ.

ಸಾಮಾನ್ಯವಾಗಿ ಚುನಾವಣಾ ಆಯೋಗ ಅತಿಸೂಕ್ಷ್ಮ ಎಂದು ಘೋಷಿಸಿದರೆ ಇಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕಾಗುತ್ತದೆ. ಹಾಗಾದರೆ ಯಾವ ಯಾವ ಕ್ಷೇತ್ರಗಳು ಅತಿ ಸೂಕ್ಷ್ಮ ಮತ ಕ್ಷೇತ್ರಗಳೆಂಬುದು ಈ ಕೆಳಕಂಡಂತಿದೆ.

ಎಲ್ಲ ಪಕ್ಷಗಳಲ್ಲೂ ಕ್ರಿಮಿನಲ್‍ಗಳು:
ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಲ್ಲೂ ಕ್ರಿಮಿನಲ್ ಹಿನ್ನೆಲೆಯ ಸಾಕಷ್ಟು ಅಭ್ಯರ್ಥಿಗಳು ಕಣದಲ್ಲಿದ್ಧಾರೆ. ಪಕ್ಷೇತರರಾಗಿಯೂ ಕ್ರಿಮಿನಲ್‍ಗಳು ಕಣದಲ್ಲಿದ್ದಾರೆ. ಕಣದಲ್ಲಿರುವ 2,560 ಅಭ್ಯರ್ಥಿಗಳ ಪೈಕಿ 391 ಮಂದಿ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಅವರಲ್ಲಿ 250ಕ್ಕೂ ಹೆಚ್ಚು ಮಂದಿ ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿದ್ಧಾರೆ. ಬಿಜೆಪಿಯಲ್ಲೇ ಅತೀ ಹೆಚ್ಚು ಕ್ರಿಮಿನಲ್ ಅಭ್ಯರ್ಥಿಗಳಿದ್ದಾರೆ. ಮೂರು ಮತ್ತು ಅದಕ್ಕಿಂತ ಹೆಚ್ಚು ಮಂದಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ಕಣದಲ್ಲಿರುವ ಕ್ಷೇತ್ರಗಳನ್ನು ರೆಡ್ ಅಲರ್ಟ್ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ.
ನಾಲ್ವರು ಕೊಲೆ ಆರೋಪ, 25 ಮಂದಿ ಕೊಲೆಯತ್ನ ಆರೋಪ ಎದುರಿಸುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ನಡೆಸಿದ ಆರೋಪವನ್ನು 23 ಮಂದಿ ಅಭ್ಯರ್ಥಿಗಳು ಎದುರಿಸುತ್ತಿದ್ದಾರೆ.

83 – ಬಿಜೆಪಿ, 59- ಕಾಂಗ್ರೆಸ್, 41- ಜೆಡಿಎಸ್ ಕ್ರಿಮಿನಲ್‍ಹಿನ್ನೆಲೆಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1090 ಮಂದಿ ಪಕ್ಷೇತರ ಅಭ್ಯರ್ಥಿಗಳಲ್ಲಿ 108 ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಕಣದಲ್ಲಿದ್ದಾರೆ. ಕೋಲಾರ, ಗಂಗಾವತಿ ಕ್ಷೇತ್ರದಲ್ಲಿ ಆರು ಮಂದಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ನಿಂತಿದ್ದಾರೆ. ಶಿಕಾರಿಪುರ, ರಾಮನಗರ, ಬೀದರ್ ದಕ್ಷಿಣ, ಲಿಂಗಸೂರು ಕ್ಷೇತ್ರಗಳಲ್ಲಿ ತಲಾ ಐವರು ಕ್ರಿಮಿನಲ್? ಹಿನ್ನೆಲೆಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿ.ಎಸ್.ಯಡಿಯೂರಪ್ಪ
ಕ್ಷೇತ್ರ: ಶಿಕಾರಿಪುರ ಕ್ಷೇತ್ರ, ಬಿಜೆಪಿ ಅಭ್ಯರ್ಥಿ,
ಒಟ್ಟು ಮೂರು ಪ್ರಕರಣ
ಭ್ರಷ್ಟಾಚಾರ ಕಾಯ್ದೆ – 13/1ಡಿ,//13./1ಸಿ (ಪಿಸಿಆರ್)
(ಐಪಿಸಿ, 405,406,420,463,465,468,471)
ಗುಂಡ್ಲುಪೇಟೆಯಲ್ಲಿ ಎರಡು ಚುನಾವಣಾ ಸಂಬಂಧ ಪ್ರಕರಣ. ಆರೋಪ ಸಾಬೀತಾದರೆ 7 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಹೆಚ್.ಡಿ. ಕುಮಾರಸ್ವಾಮಿ- ಮಾಜಿ ಸಿಎಂ
ಕ್ಷೇತ್ರ : ರಾಮನಗರ, ಚನ್ನಪಟ್ಟಣ( ಜೆಡಿಎಸ್)
ಒಟ್ಟು ಎಂಟು ಪ್ರಕರಣಗಳು
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ – 13/1(ಸಿ), 13/1,(ಡಿ),
ಎಸ್‍ಐಟಿ -ಜಂತಕಲ್, ಮೈನಿಂಗ್, ವೆಂಕಟೇಶ್ವರ ಮೈನಿಂಗ್ ಪ್ರಕರಣ, (ಐಪಿಸಿ 420,465,467,468,409)
ಆವಲಹಳ್ಳಿಯಲ್ಲಿ ಡಿನೋಟಿಫಿಕೇಷನ್, ಥಣಿಸಂದ್ರ ಡಿನೋಟಿಫಿಕೇಷನ್ ಪ್ರಕರಣ (ಪಿಸಿಆರ್)(ಐಪಿಸಿ, 406,420,463,463,465,468,471)
ಲೋಕಾಯುಕ್ತ ಪೆÇಲೀಸ್ ವಿಂಗ್- ಡಿನೋಟಿಫಿಕೇಷನ್,
(409,418,420,120(ಬಿ)), ಆರೋಪ ಸಾಬೀತಾದರೆ 7 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಶ್ರೀರಾಮುಲು
ಕ್ಷೇತ್ರ : ಮೊಳಕಾಲ್ಮೂರು( ಬಿಜೆಪಿ )
ಒಟ್ಟು 6 ಪ್ರಕರಣಗಳು
(ಐಪಿಸಿ-500, 501, 502 ,171 ಇ, ಇತ್ಯಾದಿ)
13/1(ಡಿ), 13(2) ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ
(ಐಪಿಸಿ-120(ಬಿ), 427, 506)
ಆರೋಪ ಸಾಬೀತಾದರೆ 7 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಡಿ.ಕೆ. ಶಿವಕುಮಾರ್
ಕ್ಷೇತ್ರ-ಕನಕಪುರ, (ಕಾಂಗ್ರೆಸ್)
ಒಟ್ಟು ಪ್ರಕರಣ-4
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13/1,ಸಿ, 13/1 ಇ, 13/(2),
(ಐಪಿಸಿ-120/ಬಿ,169, 177, 465, 468,419,417)
(ಆರ್ಥಿಕ ಅಪರಾಧಗಳ ನ್ಯಾಯಾಲಯ- ಐಪಿಸಿ,201, 276,204)
ದಾಖಲೆಗಳು ನಾಶ, ಸುಳ್ಳು ದಾಖಲೆ ನೀಡಿರುವುದು, ಸಂಚು ರೂಪಿಸಿರುವುದು. ಆರೋಪ ಸಾಬೀತಾದರೆ, 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಬಾಗೂರು ಮಂಜೇಗೌಡ
ಕ್ಷೇತ್ರ : ಹೊಳೆನರಸೀಪುರ ( ಕಾಂಗ್ರೆಸ್)
ಒಟ್ಟು ಪ್ರಕರಣಗಳು-2
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ -13/1(ಸಿ)
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣ
ಅಕ್ರಮಗಣಿಗಾರಿಕೆ ಕುರಿತಾದ 63, ಸಾರಿಗೆ ಇಲಾಖೆ ಅಧಿಕಾರಿಗಳ ಮೇಲಿನ ಪ್ರಕರಣ-ಜಂಟಿ ಇಲಾಖಾ ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ 5 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ವಿ. ಸೋಮಣ್ಣ
ಕ್ಷೇತ್ರ : ಗೋವಿಂದರಾಜ ನಗರ (ಬಿಜೆಪಿ)
ಪ್ರಕರಣ-1
(406, 409, 420, 463, 464, 468, 471, 120( ಬಿ))
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ

ಸಿ.ಪಿ ಯೋಗೇಶ್ವರ್
ಕ್ಷೇತ್ರ : ಚನ್ನಪಟ್ಟಣ, (ಬಿಜೆಪಿ)
ಒಟ್ಟು ಪ್ರಕರಣಗಳು : 13
(418,420,120(ಬಿ), 403, 409, 405,468,404,463,465)
ಆರ್ಥಿಕ ಅಪರಾಧ ನ್ಯಾಯಾಲಯದಲ್ಲೂ ಪ್ರಕರಣಗಳು ಇವೆ.
ಲೋಕಾಯುಕ್ತದಲ್ಲಿ ಆಸ್ತಿ ವಿವರ ಸಲ್ಲಿಕೆ ಮಾಡದಿರುವ ಆರೋಪವೂ ಇದೆ
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಆನಂದ್ ಸಿಂಗ್
ಕ್ಷೇತ್ರ : ವಿಜಯನಗರ, ಬಳ್ಳಾರಿ ( ಕಾಂಗ್ರೆಸ್)
ಪ್ರಕರಣಗಳು: 16
(ಐಪಿಸಿ-420,409,379,468, 467, 411, 434, 447,470, 471)
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಟಿ.ಹೆಚ್. ಸುರೇಶ್ ಬಾಬು
ಕ್ಷೇತ್ರ : ಕಂಪ್ಲಿ, (ಬಿಜೆಪಿ)
ಪ್ರಕರಣ: 7
(ಐಪಿಸಿ 379,420,409,468, 477(ಎ), 120(ಬಿ),477, 116, 109)
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ

ಸತೀಶ್ ಸೈಲ್
ಕ್ಷೇತ್ರ : ಕಾರವಾರ ( ಕಾಂಗ್ರೆಸ್?)
ಪ್ರಕರಣಗಳು: 8
( ಐಪಿಸಿ 420, 411, 409, 468, 379, 120(ಬಿ), 447,147, 341,427,149)
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಜಿ. ಸೋಮಶೇಖರ ರೆಡ್ಡಿ,
ಕ್ಷೇತ್ರ : ಬಳ್ಳಾರಿ ನಗರ , (ಬಿಜೆಪಿ)
ಪ್ರಕರಣಗಳು: 6
(ಐಪಿಸಿ 379,506,405,409,109,120(ಬಿ)403, 465,149,188 ಇತ್ಯಾದಿ)
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಕೃಷ್ಣಯ್ಯ ಶೆಟ್ಟಿ
ಕ್ಷೇತ್ರ : ಮಾಲೂರು,( ಬಿಜೆಪಿ)
ಪ್ರಕರಣ: 3
(ಐಪಿಸಿ 420,468,409,467,471, 120(ಬಿ) ಇತ್ಯಾದಿ)
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಅಶೋಕ್ ಖೇಣಿ
ಕ್ಷೇತ್ರ : ಬೀದರ್? ದಕ್ಷಿಣ, (ಕಾಂಗ್ರೆಸ್)
ಪ್ರಕರಣಗಳು : 2 ( ಐಪಿಸಿ 119,192,405,409,420,468 ಇತ್ಯಾದಿ )
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ನಾಗೇಂದ್ರ
ಕ್ಷೇತ್ರ : ಬಳ್ಳಾರಿ (ಕಾಂಗ್ರೆಸ್?)
ಪ್ರಕರಣಗಳು : 15
( ಐಪಿಸಿ, 406,420,468,379, 434,447,471, 120(ಬಿ) ಇತ್ಯಾದಿ )
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಸಿಟಿ ರವಿ
ಕ್ಷೇತ್ರ : ಚಿಕ್ಕಮಗಳೂರು ( ಬಿಜೆಪಿ)
ಪ್ರಕರಣ : 3
( ಐಪಿಸಿ 420, 466, 463, 409,468 ಇತ್ಯಾದಿ)
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ

ಕಟ್ಟಾ ಸುಬ್ರಮಣ್ಯ ನಾಯ್ಡು
ಕ್ಷೇತ್ರ : ಶಿವಾಜಿನಗರ, (ಬಿಜೆಪಿ)
ಪ್ರಕರಣಗಳು: 4
(ಐಪಿಸಿ- 420, 465,471, 120(ಬಿ),171(ಸಿ),109,188)
ಆರೋಪ ಸಾಬೀತಾದರೆ 7 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ

ಎಸ್. ಎ. ರವೀಂದ್ರನಾಥ್
ಕ್ಷೇತ್ರ : ದಾವಣಗೆರೆ ಉತ್ತರ( ಬಿಜೆಪಿ)
ಒಟ್ಟು ಪ್ರಕರಣಗಳು: 11
( ಐಪಿಸಿ- 406,409,504,341,186,149 ಇತ್ಯಾದಿ )
ಆರೋಪ ಸಾಬೀತಾದರೆ 10 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ.

ಈಶ್ವರಪ್ಪ
ಕ್ಷೇತ್ರ : ಶಿವಮೊಗ್ಗ ( ಬಿಜೆಪಿ)
ಒಟ್ಟು ಪ್ರಕರಣಗಳು: 5
(ಐಪಿಸಿ-117, 147, 149,150, 153(ಎ),341,426,427,499,435 ಇತ್ಯಾದಿ)
ಆರೋಪ ಸಾಬೀತಾದರೆ 5 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ

ಲಕ್ಷ್ಮಿ ಹೆಬ್ಬಾಳ್ಕರ್
ಕ್ಷೇತ್ರ : ಬೆಳಗಾವಿ ಗ್ರಾಮೀಣ( ಕಾಂಗ್ರೆಸ್)
(ಐಪಿಸಿ,171(ಎಚ್),500 ಇತ್ಯಾದಿ)
ಆರೋಪ ಸಾಬೀತಾದರೆ 2 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ