ಶ್ರೀನಗರ:ಮೇ-8: ಕಾಶ್ಮೀರ ಪ್ರವಾಸಕ್ಕೆಂದು ಬಂದಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಪ್ರತಿಭಟನಾಕಾರರ ಕಲ್ಲುತೂರಾಟಕ್ಕೆ ಸಿಲುಕಿ ಗಾಯಗೊಂದು ಕೋಮಾಸ್ಥಿಒತಿಗೆ ತಲುಪಿದ್ದ ಅವರು ಈಗ ಮೃತಪಟ್ಟಿದ್ದಾರೆ.
ಚೆನ್ನೈನ 22 ವರ್ಷದ ಆರ್.ತಿರುಮಣಿ ಕಾಶ್ಮೀರ ಪ್ರವಾಸಕ್ಕೆ ಬಂದಿದ್ದರು. ಶ್ರೀನಗರದ ಹೊರವಲಯ ನರಬಾಲ್ನಲ್ಲಿ ಸೋಮವಾರ ಬೆಳಿಗ್ಗೆ ಪ್ರವಾಸಿಗರ ವಾಹನದ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಕಲ್ಲೇಟಿನಿಂದ ತೀವ್ರವಾಗಿ ಗಾಯಗೊಂಡ ತಿರುಮಣಿ ಅವರನ್ನು ಬೆಳಿಗ್ಗೆ 10:30ರ ಸುಮಾರಿಗೆ ಆಸ್ಪತ್ರೆಗೆ ಸೇರಿಸಲಾಯಿತು.
ಆದರೆ, ಕೋಮಾ ಸ್ಥಿತಿ ತಲುಪಿದ ಅವರು ರಾತ್ರಿ 8:30ರ ಸುಮಾರಿಗೆ ಮೃತಪಟ್ಟಿದ್ದಾರೆ. ಗುಂಪುಗಳ ಕಲ್ಲು ತೂರಾಟದ ಘರ್ಷಣೆ ವೇಳೆ ಪ್ರವಾಸಿಗರ ಬಸ್ನಲ್ಲಿದ್ದ ತಿರುಮಣಿ ಗಾಯಗೊಂಡಿದ್ದರು. ಪ್ರವಾಸಿಗರು ಗುಲ್ಮಾರ್ಗ್ ಕಡೆ ಹೊರಟಿದ್ದರು. ಈ ಘಟನೆಯಲ್ಲಿ 19 ವರ್ಷದ ಸ್ಥಳೀಯ ಯುವತಿಯೂ ಗಾಯಗೊಂಡಿರುವುದಾಗಿ ಶ್ರೀನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ತಿರುಮಣಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶ್ರೀನಗರದ ಪೊಲೀಸ್ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ತಿರುಮಣಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ನಾಚಿಕೆಯಿಂದ ನನ್ನ ತಲೆ ಬಾಗಿದೆ. ಇದು ತುಂಬ ದುಃಖದ ಸಂಗತಿ್ ಎಂದು ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಸೋಫಿಯಾನ್ನಲ್ಲಿ ಕಳೆದ ವಾರ 50 ಮಕ್ಕಳಿದ್ದ ಶಾಲಾ ವಾಹನದ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಮಗುವೊಂದು ಗಾಯಗೊಂಡಿತ್ತು.
ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರು ಕಾಶ್ಮೀರದಲ್ಲಿ ನಡೆಸುತ್ತಿರುವ ಕಲ್ಲುತೂರಾಟ ಘರ್ಷಣೆ ಇದೀಗ ಪ್ರವಾಸಿಗರು ಹಾಗೂ ಶಾಲಾ ವಾಹನದ ಕಡೆಗೂ ತಿರುಗಿರುವುದು ಸರ್ಕಾರದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಜಮ್ಮು–ಕಾಶ್ಮೀರದ ಆದಾಯದ ಬಹುಪಾಲು ಪ್ರವಾಸೋದ್ಯಮದಿಂದಲೇ ಬರುತ್ತಿದೆ.
ಪ್ರವಾಸಿಗರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಪ್ರವಾಸಿಗನನ್ನು ಕೊಂದಿದ್ದೇವೆ. ನಾವು ಒಬ್ಬ ಪ್ರವಾಸಿಗ, ಒಬ್ಬ ಅತಿಥಿಯ ಮೇಲೆ ಕಲ್ಲು ತೂರಿ ಸಾವಿಗೆ ನೂಕಿದ್ದೇವೆ…’ ಎಂದು ಟ್ವೀಟ್ ಮೂಲಕ ವಿಪಕ್ಷ ನಾಯಕ ಒಮರ್ ಅಬ್ದುಲ್ಲಾ ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Shrinagar,Tourist Death In Stone-Throwing,CM Mehbooba Mufti said Head Hangs In Shame