
ಬೀದರ್, ಮೇ 8- ಪ್ರಧಾನಿ ನರೇಂದ್ರ ಮೋದಿ ಬೀದರ್‍ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ನೇತೃತ್ವದಲ್ಲಿ ರ್ಯಾಲಿ ನಡೆಯಿತು.
ನಗರದ ನೌಬಾದ್‍ನಿಂದ ಆರಂಭವಾದ ರ್ಯಾಲಿಯು ಬಸ್ ನಿಲ್ದಾಣ, ಮಡಿವಾಳ ವೃತ್ತ, ರೋಟರಿ ವೃತ್ತ, ಅಂಬೇಡ್ಕರ್ ವೃತ್ತ, ಗವಾನ್ ಚೌಕ್, ಚೌಬಾರಾ, ಮಂಗಲಪೇಟ್, ಕರ್ನಾಟಕ ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಬೊಮಗೊಂಡೇಶ್ವರ ವೃತ್ತ, ಗುಂಪಾ, ಮೌನೇಶ್ವರ ಮಂದಿರ, ಹಳೆ ಮೈಲೂರು ರಸ್ತೆ, ಜಿಎನ್‍ಡಿ ಕಾಲೇಜು ರಸ್ತೆ, ಮೈಲೂರು ಕ್ರಾಸ್, ವಿಶಾಲ ಫಂಕ್ಷನ್ ಹಾಲ್, ಕೋಟರ್ಕಿ ಹೌಸ್ ಹಿಂದುಗಡೆ ಮೂಲಕ ಗಾಂಧಿಗಂಜ್‍ನ ಬಸವೇಶ್ವರ ಮಂದಿರಕ್ಕೆ ಆಗಮಿಸಿ ಕೊನೆಗೊಳ್ಳಲಾಯಿತು. ರ್ಯಾಲಿ ಯುದ್ದಕ್ಕೂ ಪ್ರಧಾನಿ ಮೋದಿ, ಬಿಜೆಪಿ ಜೈಕಾರ ಹಾಕಲಾಯಿತು.
ಬುಧವಾರ ಸಂಜೆ ಬೀದರ್ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಸೂರ್ಯಕಾಂತ ನಾಗಮಾರಪಳ್ಳಿ ಕೋರಿದರು.
ಉತ್ತರ ಪ್ರದೇಶದ ಸಚಿವ ಸ್ವತಂತ್ರದೇವ ಸಿಂಗ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಸೇರಿದಂತೆ ಇತರಿದ್ದರು. ರ್ಯಾಲಿಯಲ್ಲಿ ಸಾವಿರಕ್ಕೂ ಅಧಿಕ ಬೈಕ್‍ಗಳಿ ಇದ್ದವು.