ಕೇರಳದಲ್ಲಿ ರಾಜಕೀಯ ಹಿಂಸಾಚಾರ ಉಲ್ಬಣ: ಆರ್‍ಎಸ್‍ಎಸ್ ಕಾರ್ಯಕರ್ತನ ಕೊಚ್ಚಿ ಕೊಲೆ

ಕಣ್ಣೂರು, ಮೇ 8-ಕೇರಳದಲ್ಲಿ ರಾಜಕೀಯ ಹಿಂಸಾಚಾರ ಮತ್ತೆ ಉಲ್ಬಣಗೊಂಡಿದೆ. ಸಿಪಿಐ (ಎಂ) ಕಾರ್ಯಕರ್ತರು ಆರ್‍ಎಸ್‍ಎಸ್ ಯುವ ಮುಂದಾಳು ಒಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಕಣ್ಣೂರು ಜಿಲ್ಲೆಯಲ್ಲಿ ನಡೆದಿದ್ದರು. ಗಡಿ ಪ್ರಾಂತ್ಯದಲ್ಲಿ ಉದ್ರಿಕ್ತ ವಾತಾವರಣ ನೆಲೆಗೊಂಡಿದೆ. ದಕ್ಷಿಣ ಕಣ್ಣೂರು ಜಿಲ್ಲೆಯ ಗಡಿ ಪ್ರಾಂತ್ಯ ಪಲ್ಲೂರಿನಲ್ಲಿ ಮಾಕ್ರ್ಸ್‍ವಾದಿ ನಾಯಕನೊಬ್ಬನ ಮೇಲೆ ನಡೆದ ಮರಣಾಂತಿಕ ದಾಳಿಗೆ ಪ್ರತೀಕಾರವಾಗಿ ಆರ್‍ಎಸ್‍ಎಸ್ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಗೆ ಕೊಚ್ಚಿ ಹತ್ಯೆ ಮಾಡಲಾಗಿದೆ.
ಆಟೋರಿP್ಷÁ ಚಾಲಕ ಮತ್ತು ಸ್ಥಳೀಯ ಆರ್‍ಎಸ್‍ಎಸ್ ಮುಂದಾಳು ಶೇಮಜ್ ಹತ್ಯೆಯಾದ ಯುವಕ. ನಿನ್ನೆ ರಾತ್ರಿ ಆಟೋದಲ್ಲಿ ತೆರಳುತ್ತಿದ್ದ ಈತನನ್ನು ಅಡ್ಡಗಟ್ಟಿದ ಸಿಪಿಎಂ ಕಾರ್ಯಕರ್ತರ ಗುಂಪೆÇಂದು ಕೊಚ್ಚಿ ಹಾಕಿದರು. ರಕ್ತದ ಮಡುವಿನಲ್ಲಿದ್ದ ಶೇಮ್‍ಜ್‍ನನ್ನು ಕೋಳಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಆತ ಕೊನೆಯುಸಿರೆಳೆದ.
ಇದಕ್ಕೂ ಮುನ್ನ ಶೇಮ್‍ಜ್ ಸಿಎಂಐ(ಎಂ) ಸ್ಥಳೀಯ ಮುಖಂಡ ಬಾಬು ಎಂಬುವರ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದ. ಇದಕ್ಕೆ ಪ್ರತೀಕಾರವನ್ನು ಕಮ್ಯುನಿಸ್ಟ್ ಕಾರ್ಯಕರ್ತರು ಈ ಹತ್ಯೆ ಮಾಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರಿಗಾಗಿ ಬಲೆ ಬೀಸಿದ್ಧಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ