ದಾವಣಗೆರೆ, ಮೇ 8-ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಪೆÇಲೀಸರು ನಾಲ್ವರನ್ನು ಬಂಧಿಸಿ 1.39 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.
ಅಕ್ಕಿ ವ್ಯಾಪಾರಿ ಉಮೇಶ, ಖಾನಾವಳಿ ಮಾಲೀಕ ಮಲ್ಲಿಕಾರ್ಜುನ, ಎಸ್.ಎಸ್.ಬಡಾವಣೆಯ ಪ್ರದೀಪ್, ಬಂಬೂಬಜಾರ್‍ನ ನಾಗರಾಜ್ ಬಂಧಿತರು.
ನಗರದ ಕುಂದವಾಡ ರಸ್ತೆ ಮಹಾಲಕ್ಷ್ಮಿ ಲೇಔಟ್‍ನಲ್ಲಿರುವ ಉಮೇಶ್ ವಾಸದ ಮನೆಯಲ್ಲಿ ಇವರೆಲ್ಲ ಸೇರಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಉದೇಶ್ ಮಾರ್ಗದರ್ಶನದಲ್ಲಿ ಡಿಸಿಐಬಿ ಘಟಕದ ಅಂಬರಾಯ ಎಂ.ಕಾಮನಮನೆ ಅವರು ಸಿಬ್ಬಂದಿಯೊಂದಿಗೆ ತೆರಳಿ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.