ಶ್ರೀನಗರ, ಮೇ 8-ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಹಿಂಸಾಚಾರಕ್ಕೆ ಚೆನ್ನೈನ ಯುವಕನೊಬ್ಬ ಬಲಿಯಾಗಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಗುಲ್ಮಾರ್ಗ್ ರಸ್ತೆಯಲ್ಲಿ ಉದ್ರಿಕ್ತ ಗುಂಪೆÇಂದು ನಿನ್ನೆ ನಡೆಸಿದ ಕಲ್ಲು ತೂರಾಟದಲ್ಲಿ ತಿರುಮತಿ(22) ಎಂಬ ಯುವಕ ಅಸುನೀಗಿದ.
ತಿರುಮನಿ ಕಾಶ್ಮೀರ ಪ್ರವಾಸದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ನರ್ಬಲ್ ರಸ್ತೆಯಲ್ಲಿ ಯೋಧರ ವಿರುದ್ಧ ಪ್ರತಿಭಟನಾಕಾರರ ಗುಂಪೆÇಂದು ತಲ್ಲು ತೂರಾಟದಲ್ಲಿ ತೊಡಗಿತ್ತು.
ಕಾಶ್ಮೀರದಲ್ಲಿ ಯೋಧರು ಅಮಾಯಕ ನಾಗರಿಕರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷವು ಪ್ರತಿಭಟನೆ ನಡೆಸುತ್ತಿತ್ತು. ಇದೇ ಸಂದರ್ಭದಲ್ಲಿ ತಿರುಮತಿ ಇದ್ದ ಕಾರು ಭದ್ರತಾ ಪಡೆ ಮತ್ತು ಕಲ್ಲೆಸೆಯುತ್ತಿದ್ದ ಪ್ರತಿಭಟನಾಕಾರ ಮಧ್ಯೆ ಸಿಲುಕಿತು. ಈ ವೇಳೆ ಕಲ್ಲೊಂದು ಯುವಕನ ತಲೆಗೆ ಬಡಿಯಿತು. ತೀವ್ರ ರಕ್ರಸ್ತಾವದಿಂದ ಸ್ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ತಿರುಮನಿ ಕೊನೆಯುಸಿರೆಳೆದ.
ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದಾಗಿ ನಾನು ಮತ್ತು ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ ಎಂದು ಅವರು ನೊಂದು ನುಡಿದಿದ್ದಾರೆ. ನಿನ್ನೆ ತಡರಾತ್ರಿ ಅವರು ಮೃತನ ಕುಟುಂಬಸ್ಥರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಘಟನೆಯಲ್ಲಿ ಹಂಡ್ವಾರದ ನಬ್ರೀನಾ(19) ಎಂಬ ಬಾಲಕಿಯೂ ಗಾಯಗೊಂಡಿದ್ದಾಳೆ.