
ಬಾದಾಮಿ: ಮೇ-8: ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕನ ಒಡೆತನದ ರೆಸಾರ್ಟ್ ಹಾಗೂ ಹೋಟೆಲ್ ಮೇಲೆ ಐಟಿ ದಾಳಿ ನಡೆದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಇಬ್ರಾಹಿಂ, ಈ ರೆಸಾರ್ಟ್ ನಲ್ಲಿ ನಾನು ವಾಸ್ತವ್ಯ ಹೂಡಿರಲಿಲ್ಲ. ನಾನು ಹಾಗೂ ಎಸ್ ಆರ್ ಪಾಟೀಲ್
ಊಟಕ್ಕೆಂದು ಈ ರೆಸಾರ್ಟ್ ಗೆ ಬಂದಿದ್ದೆವು ಎಂದು ಹೇಳಿದ್ದಾರೆ.
ನಾವು ಊಟಕ್ಕೆಂದು ಇಲ್ಲಿ ಬಂದಿದ್ದಾಗ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ
ನನ್ನನ್ನ ಏನೂ ಪ್ರಶ್ನೆ ಮಾಡಲಿಲ್ಲ , ಎರಡು ಗಂಟೆ ಬಳಿಕ ಹೊರಹೋಗಲು ಹೇಳಿದ್ರು ಹೊರಟಿದ್ದೇವೆ.
ಒಳಗಡೆ ಏನ್ ಸಿಗುತ್ತೆ ಅಲ್ಲಿ , ಏನು ಇಲ್ಲ , ಐಟಿ ಅಧಿಕಾರಿಗಳು ಸುಮ್ಮನೆ ಕೂತಿದ್ದಾರೆ ಎಂದು ಇಬ್ರಾಹಿಂ ಹೇಳಿದ್ದಾರೆ.