
ಬೀದರ್, ಮೇ 7- ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೋಮವಾರ ಹುಮನಾಬಾದ್ನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.
ಹುಮನಾಬಾದ್ ಪಟ್ಟಣದ ಥೇರ್ ಮೈದಾನದಲ್ಲಿ ಪಕ್ಷದ ಅಭ್ಯರ್ಥಿ ಸುಭಾಷ ಕಲ್ಲೂರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ, ದೇಶದ ಭವ್ಯ ಪರಂಪರೆ, ಸಂಸ್ಕøತಿ, ಇತಿಹಾಸಕ್ಕೆ ಅವಮಾನಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇಂಥವರಿಗೆ ಪಾಠ ಕಲಿಸಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿಯ 23 ಕಾರ್ಯಕರ್ತರ ಹತ್ಯೆ ನಡೆದರೂ ಕಾಂಗ್ರೆಸ್ ಸರ್ಕಾರ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಲ್ಲ. ಅಪರಾಧಿಗಳು ಹಾಗೂ ಜಿಹಾದಿಗಳನ್ನು ಪೆÇ್ರೀತ್ಸಾಹಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹುಮನಾಬಾದ್ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದವರು ಭೂಕಬಳಿಕೆ ಮಾಡಿ ಬಡವರಿಗೆ ವಂಚಿಸಿದ್ದಾರೆ. ಇಂಥ ಭ್ರಷ್ಟರಿಗೆ ಪಾಠ ಕಲಿಸಬೇಕು. ಸರಳ ವ್ಯಕ್ತಿತ್ವದ ಸುಭಾಷ ಕಲ್ಲೂರ್ ಅವರಿಗೆ ಗೆಲ್ಲಿಸಬೇಕೆಂದು ಕರೆ ನೀಡಿದರು.
ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ರಾಜ್ಯದ ಕಟ್ಟೆಕಡೆಯ ವ್ಯಕ್ತಿಗೂ ಮುಟ್ಟಬೇಕಾದರೆ ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ತರಲೇಬೇಕಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿಗೆ ಹೊಸ ಆಯಾಮವೇ ಸಿಗಲಿದೆ. ಕರ್ನಾಟಕದ ಪ್ರಗತಿಯ ಹೆಬ್ಬಾಗಿಲು ತೆರೆಯಲು ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಿಸಲೇಬೇಕಿದೆ ಎಂದರು.
ಅಭ್ಯರ್ಥಿ ಸುಭಾಷ ಕಲ್ಲೂರ ಮಾತನಾಡಿ, ಕಾಂಗ್ರೆಸ್ನಿಂದ ಕ್ಷೇತ್ರ ಜನತೆ ಬೇಸತ್ತಿದ್ದಾರೆ. ಸ್ಥಳೀಯ ಶಾಸಕರು ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಎಸ್ಸೆಸ್ಕೆಗೆ ಬೀಗ ಹಾಕಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಅವಕಾಶ ನೀಡಿ ಎಂದು ಕೋರಿದರು.
ಸಂಸದ ಭಗವಂತ ಖೂಬಾ, ಉತ್ತರ ಪ್ರದೇಶ ಸಚಿವ ಸ್ವತಂತ್ರ ದೇವಸಿಂಗ್, ಶಾಸಕ ಸುಭ್ರೂತ್ ಪಾಠಕರ್, ಪ್ರಮುಖರಾದ ಶಿವಾನಂದ ಮಂಠಾಳಕರ್, ಸೋಮನಾಥ ಪಾಟೀಲ್, ಈಶ್ವರಸಿಂಗ್ ಠಾಕೂರ್, ಗುಂಡುರೆಡ್ಡಿ, ಸುಭಾಷ ಗಂಗಾ, ಪದ್ಮಾಕರ ಪಾಟೀಲ್, ಬಸವರಾಜ ಆರ್ಯ, ಮಲ್ಲಿಕಾರ್ಜುನ ಕುಂಬಾರ, ವಿಶ್ವನಾಥ ಪಾಟೀಲ್ ಮಾಡಗೋಳ, ಪರಮೇಶ್ವರ ಆರ್ಯ, ಪ್ರಭಾಕರ ನಾಗರಾಳೆ, ರವಿಕಾಂತ ಹೂಗಾರ, ಬ್ಯಾಂಕರೆಡ್ಡಿ, ಮಹ್ಮದ್ ಇಲಿಯಾಸ್, ಗಜೇಂದ್ರ ಕನಕಟಕರ್, ನಾಗೇಶ ಕಲ್ಲೂರ, ಮಹೇಶ್ವರಿ ವಾಲಿ, ಮಹ್ಮದ್ ಸತ್ತಾರ್ ಇತರರಿದ್ದರು.