ಬೆಂಗಳೂರು ಮೇ-6: ಗೋವಿಂದಪುರದಲ್ಲಿ ಮೊನ್ನೆ ನಡೆದ ಎಂಇಪಿ ರ್ಯಾಲಿ ಮೇಲೆ ದುಷ್ಕರ್ಮಿಗಳುವ ಕಲ್ಲು ತೂರಾಟದ ಮೂಲಕ ನಡೆಸಿದ ದಾಳಿಯಲ್ಲಿ ದೇವರೆ ತಮ್ಮನ್ನು ರಕ್ಷಿಸಿದ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾಡಹಗಲಲ್ಲೇ ಮಹಿಳೆಯರ ಮೇಲೆ ಕಲ್ಲು ತೂರಿ ಗುಂಪು-ಗುಂಪಾಗಿ ಪೂರ್ವಯೋಜಿತ ದಾಳಿ ನಡೆಸುತ್ತಾರೆಂದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಇದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಕರ್ನಾಟಕ ಒಂದು ಉದಾರ ಚಿಂತನೆಯ , ಹೃದಯ ಶ್ರೀಮಂತರು ಹಾಗೂ ಮೃದು ಸ್ವಭಾವದ ಜನರು ಇರುವ ರಾಜ್ಯ ಇಂತಹ ರಾಜ್ಯದಲ್ಲಿ ಇಂತಹ ಕಹಿ ಘಟನೆ ನಡೆಯುತ್ತದೆ ಎಂದು ನಾನು ಕನಸು ಮನಸ್ಸಿನಲ್ಲೂ ನಿರೀಕ್ಷಿಸಿರಲಿಲ್ಲ. ಕೆಲವೇ ಕೆಲವು ಪುಂಡು ಪೊಕರಿಗಳಿಂದ ರಾಜ್ಯದ ಹೆಸರಿಗೆ ಕೆಟ್ಟ ಹೆಸರು ಬರಬಾರದು . ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ದುಷ್ಕರ್ಮಿಗಳನ್ನು ಹಾಗೂ ಅವರ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವುದು ಪೊಲೀಸರ ಕರ್ತವ್ಯ.
ಘಟನೆಗೆ ಸಂಬಂದಧಿಸಿದಂತೆ ವಿಡಿಯೋ ಚಿತ್ರೀಕರಣ ಸೇರಿದಂತೆ ಪೂರಕ ದಾಖಲೆಗಳು ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಇದನ್ನು ನೋಡಿದ್ದಾರೆ ಎಂದು ತಿಳಿಸಿದರು.