
ಬೀದರ್, ಮೇ 5-ಔರಾದ್ ಕ್ಷೇತ್ರದ ಸಂತಪುರ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ಪರವಾಗಿ ರಾಜ್ಯಸಭಾ ಸದಸ್ಯ ಹನುಮಂತಯ್ಯ ಪ್ರಚಾರ ನಡೆಸಿದರು.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಹನುಮಂತಯ್ಯ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಪರ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದು ಹೋದ ನಂತರ ಔರಾದ್ನಲ್ಲಿ ಕಾಂಗ್ರೆಸ್ ಅಲೆ ಹೆಚ್ಚಾಗಿದೆ. ಈ ಬಾರಿ ಬಿಜೆಪಿಗೆ ಪಾಠ ಕಲಿಸಲು ಮತದಾರರು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿ ವಿಜಯಕುಮಾರ್ ಕೌಡಾಳ್ ಮಾತನಾಡಿದರು. ಪ್ರಮುಖರಾದ ರತಿಕಾಂತ ಮಜಗೆ, ಆನಂದ ಚವ್ಹಾಣ್, ಲಕ್ಷ್ಮಣ ಸೋರಳ್ಳಿಕರ್, ಯೂನುಸ್ಖಾನ್ ಪಟೇಲ್, ಓಂಪ್ರಕಾಶ, ವಿದ್ಯಾಸಾಗರ ಬ್ಯಾಳೆ, ಪ್ರಕಾಶ ಸಿಂಧೆ ಸೇರಿದಂತೆ ಇನ್ನಿತರರ ಮುಖಂಡರು ಉಪಸ್ಥಿತರಿದ್ದರು.