ಮಹದಾಯಿ ವಿಚಾರವಾಗಿ ಪ್ರಧಾನಿ ಸುಳ್ಲುಹೇಳುವ ಮೂಲಕ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು:ಮೇ-6: ಮಹದಾಯಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಜನರನ್ನು ತಪ್ಪು ದಾರಿಗೆ ಎಳೆಯುವ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ , ಮೋದಿಯವರ ವಾಕರಿಕೆ ತರಿಸುವ ಈ ಹೇಳಿಕೆಗಳನ್ನು ಜನ ಒಪ್ಪುವುದಿಲ್ಲ ಎಂದರು. ಮಹದಾಯಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಪ್ರಧಾನಿಯವರದ್ದಾಗಿತ್ತು. ಅದನ್ನು ಅವರು ನಿಭಾಯಿಸಲ್ಲಿಲ್ಲ. 2007 ರಲ್ಲಿ ಸೋನಿಯಾಗಾಂಧಿ ಪ್ರಧಾನಿ ಆಗಿದ್ದರೆ? ಎಂದೂ ಅವರು ಪ್ರಶ್ನಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೀಳು ಮಟ್ಟದ ಭಾಷೆ ಬಳಸಿ ಪ್ರಚಾರ ನಡೆಸುತ್ತಿದ್ದು, ಹೇಸಿಗೆ ಮತ್ತು ವಾಕರಿಕೆ ತರಿಸುವಂತಿದೆ ಎಂದರು.

ಇಲ್ಲಿನ ಬಿಜೆಪಿ ನಾಯಕರಿಗೆ ಫೇಸ್ ವ್ಯಾಲ್ಯೂನೇ ಇಲ್ಲ. ಆದ್ದರಿಂದ ಮೋದಿ ಮತ್ತು ಅಮಿತ್ ಶಾ ಅವರನ್ನು ಕರೆಸಿದ್ದಾರೆ. ಇದು ರಾಜ್ಯದ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ತಮ್ಮ ಕೈಯಲ್ಲಿ ಆಗದ ಕಾರಣ ಮೋದಿಯರ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿವರೆಗೆ ಏಳರಿಂದ ಎಂಟು ಬಾರಿ ಬಂದು ಹೋಗಿದ್ದಾರೆ. ಅವರ ಪ್ರಭಾವ ಆಗಿಲ್ಲ. ಇವರು ಪ್ರಚಾರದಲ್ಲಿ ಬಳಸುತ್ತಿರುವ ಭಾಷೆ ನಾಗರೀಕವಲ್ಲ, ಕೀಳು ಮಟ್ಟದ ಅಸಂಸದೀಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆರೆ ಎಂದು ಕಿಡಿಕಾರಿದ್ದಾರೆ.

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಮೂರು ಪಕ್ಷಗಳ ನಡುವೆ ಸ್ಪರ್ಧೆ ಕಂಡರೂ ವಾಸ್ತವವಾಗಿ ಎಲ್ಲಾ ಮೂರು ಕಡೆ ಇಲ್ಲ, ಕೆಲವೆಡೆ ಕಾಂಗ್ರೆಸ್, ಬಿಜೆಪಿ ಇನ್ನು ಕೆಲವೆಡೆ ಕಾಂಗ್ರೆಸ್, ಜೆಡಿಎಸ್ ಸ್ಪರ್ಧೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂದು ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಅಂದರೆ ಕುಮಾರಸ್ವಾಮಿ ಕಿಂಗ್ ಮೇಕರ್ ಅಲ್ಲ ಕಿಂಗ್ ಎನ್ನುತ್ತಿದ್ದಾರೆ. ಏಳು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕಳೆದ ಬಾರಿ ಬಿಜೆಪಿ ಶೂನ್ಯ. ಈಗ ದೊಡ್ಡ ಬದಲಾವಣೆ ಆಗಿದೆ ಎನಿಸುತ್ತಿಲ್ಲ. ಜೆಡಿಎಸ್ ಇಡೀ ಉತ್ತರ ಕರ್ನಾಟಕದಲ್ಲಿ ನಾಲ್ಕು ಸ್ಥಾನ ಮಾತ್ರ ಗೆದ್ದಿತ್ತು. ಆದ್ರೆ ಕೊಡಗು ಹೊರತು ಎಲ್ಲಾ ಕಡೆ ಕಾಂಗ್ರೆಸ್ ಗೆದ್ದಿದೆ. ಕರಾವಳಿ ಬಿಜೆಪಿಯ ಕೋಮುವಾದದ ಪ್ರಯೋಗಾಲಯ. ಕರಾವಳಿ, ಉತ್ತರ ಕನ್ನಡ ಭಾಗದಲ್ಲಿ ಕಳೆದ ಬಾರಿ ಬಿಜೆಪಿಗೆ ನಾಲ್ಕು ಸ್ಥಾನ ಸಿಕ್ಕಿತ್ತು. ಈಗ ಹೇಗೆ 19 ಬರುತ್ತೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ