ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಪಕ್ಶಗಳ ಒಟ್ಟು 2665 ಅಭ್ಯರ್ಥಿಗಳು ಅಖಾಡದಲ್ಲಿ

ಬೆಂಗಳೂರು, ಮೇ 5- ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಜೆಡಿಯು, ಬಿಎಸ್‍ಪಿ, ಆರ್‍ಪಿಐ, ಆಮ್‍ಆದ್ಮಿ ಸೇರಿದಂತೆ ಹಲವು ಪಕ್ಷಗಳು ಚುನಾವಣಾ ಕಣದಲ್ಲಿದ್ದು, ಒಟ್ಟು 2665 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ್‍ಕುಮಾರ್ ಅಕಾಲಿಕ ನಿಧನವಾಗಿದ್ದರಿಂದ ಆ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನಿಂದ ಸದ್ಯ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಒಂದು ಸ್ಥಾನ ಕಡಿಮೆಯಾಗಿದೆ.

ಬಿಜೆಪಿಯಿಂದ- 223, ಕಾಂಗ್ರೆಸ್-221, ಜೆಡಿಎಸ್-200, ಬಿಎಸ್‍ಪಿ-18, ಪಕ್ಷೇತರರು-115, ಮಹಿಳಾ ಅಭ್ಯರ್ಥಿಗಳು-219, ಪುರುಷರು-2436 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇನ್ನುಳಿದಂತೆ ಇತರೆ ಪಕ್ಷಗಳಾದ ಸಿಪಿಎಂ-19, ಎನ್‍ಸಿಪಿ-14, ಜೆಡಿಯು-28, ಎಂಇಪಿ-221 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಶಿವಸೇನೆ ಈ ಬಾರಿ ರಾಜ್ಯದಲ್ಲಿ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಮೊದಲು ನಟ ಉಪೇಂದ್ರ ನೇತೃತ್ವದಲ್ಲಿ ಸದ್ದು ಮಾಡಿದ್ದ ಕೆಪಿಜೆಪಿ ನಂತರ ಆ ಪಕ್ಷದಿಂದ ಅವರು ಹೊರ ಬಂದ ಮೇಲೆ ಪಕ್ಷದ ಪ್ರಧಾನಕಾರ್ಯದರ್ಶಿ ಮಹೇಶ್‍ಗೌಡ ಅವರು 32 ಅಭ್ಯರ್ಥಿಗಳನ್ನು ಈ ಬಾರಿ ವಿಧಾನಸಭೆ ಚುನಾವಣೆ ಅಖಾಡಕ್ಕಿಳಿಸಿದ್ದಾರೆ.
ಸ್ವರಾಜ್ ಇಂಡಿಯಾ ಪಕ್ಷ ದಿಂದ ದಿ.ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಮೇಲುಕೋಟೆಯಿಂದ ಕಣಕ್ಕಿಳಿಸಲಾಗಿದೆ. ಮಹರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿ ಗಡಿ ಭಾಗದಲ್ಲಿ ಐದು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.

ಸಿಪಿಐ ಎರಡು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಸ್‍ಡಿಪಿಐ ಆರು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚಾಮರಾಜನಗರ ಕ್ಷೇತ್ರದಿಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ವಾಟಾಳ್ ನಾಗರಾಜ್ ಕಣಕ್ಕಿಳಿದಿದ್ದಾರೆ.
ದೆಹಲಿಯಲ್ಲಿ ಭಾರೀ ಸದ್ದು ಮಾಡಿ, ಭಾರೀ ಬಹುಮತಗಳಿಂದ ಅಧಿಕಾರದ ಗದ್ದುಗೆಗೇರಿದ ಆಮ್‍ಆದ್ಮಿ ಪಾರ್ಟಿ ಕರ್ನಾಟಕದಲ್ಲಿ ಈ ಬಾರಿ 28ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಅವರ ನಾಮಪತ್ರ ತಿರಸ್ಕøತವಾದ ಹಿನ್ನೆಲೆಯಲ್ಲಿ ಅಲ್ಲಿನ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲ ನೀಡಲು ನಿರ್ಧರಿಸಿದೆ.

ಇನ್ನುಳಿದಂತೆ ಸಮಸಮಾಜ ಪಾರ್ಟಿ ಜೆಡಿಎಸ್‍ಗೆ ಬೆಂಬಲ ಘೋಷಿಸಿದೆ. ಸ್ವತಂತ್ರ ಪಾರ್ಟಿ ರಚನೆ ಮಾಡಿರುವ ನಮ್ಮ ಕಾಂಗ್ರೆಸ್ ಎಂಬ ಪಕ್ಷ ರಚನೆ ಮಾಡಿರುವ ವರ್ತೂರು ಪ್ರಕಾಶ್ ಕೋಲಾರದಲ್ಲಿ ಸ್ಪರ್ಧಿಸಿದ್ದಾರೆ. ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ರಚನೆ ಮಾಡಿರುವ ಅನುಪಮಾ ಶಣೈ ಅವರು ಕಾಪು ವಿಧಾನಸಭೆ ಕ್ಷೇತ್ರದ ಹುರಿಯಾಳು ಆಗಿದ್ದಾರೆ. ವಿವಿಧ ಚಿನ್ಹೆಗಳೊಂದಿಗೆ 1115 ಅಭ್ಯರ್ಥಿಗಳು ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಪಕ್ಷಅಭ್ಯರ್ಥಿಗಳು
ಬಿಜೆಪಿ223
ಕಾಂಗ್ರೆಸ್221
ಜೆಡಿಎಸ್200
ಬಿಎಸ್‍ಪಿ18
ಎಂಇಪಿ174
ಸಿಪಿಎಂ19
ಎಸ್‍ಡಿಪಿಐ06
ಎಎಪಿ28
ಸಿಪಿಐ02
ಎನ್‍ಸಿಪಿ14
ಜೆಡಿಯು28
ಶಿವಸೇನೆ40
ಆರ್‍ಪಿಐ30
ಎಂಇಎಸ್05
ಕೆಪಿಜೆಪಿ32
ಕನ್ನಡ ಚಳವಳಿ ವಾಟಾಳ್ ಪಕ್ಷ01
ಸ್ವರಾಜ್‍ಇಂಡಿಯಾ ಪಕ್ಷ 01
ನಮ್ಮ ಕಾಂಗ್ರೆಸ್01
ಭಾರತೀಯ ಜನಶಕ್ತಿ ಕಾಂಗ್ರೆಸ್01
ಪಕ್ಷೇತರರು1115

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ