ಮೈಸೂರು, ಮೇ 4- ತಮ್ಮ ನೈಜ ಅಭಿನಯ ಹಾಗೂ ನೇರ ಮಾತುಗಳಿಂದಾಗಿ ಫಯರ್ ಸ್ಟಾರ್ ಎಂದು ಹೇಳಲಾಗಿರುವ ಹುಚ್ಚ ವೆಂಕಟ್ ಅವರು ಮದುವೆಯಾಗುತ್ತಿದ್ದಾರಂತೆ..!
ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರ ಪ್ರಶ್ನೆಗೆ ನಗುತ್ತಲೇ ತಾವು ಹಸೆಮಣೆ ಏರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಹುಡುಗಿ ಯಾರು ಎಂಬ ಪ್ರಶ್ನೆಗೆ ಅಷ್ಟೇ ನಯವಾಗಿ ಉತ್ತರಿಸಿದ ವೆಂಕಟ್ ನನ್ನ ಹತ್ತಿರದ ಸಂಬಂಧಿ. ನಿಮ್ಮನ್ನು (ಮಾಧ್ಯಮದವರ) ಖಂಡಿತವಾಗಿಯೂ ಕರೆಯುತ್ತೇನೆ. ಆದರೆ ನಿಮ್ಮ ಕ್ಯಾಮೆರಾಗಳನ್ನು ಮಾತ್ರ ತರಬೇಡಿ ಎಂದು ಹೇಳಿದ್ದಾರೆ.
ಪ್ರಸ್ತುತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಪ್ರಚಾರ ಹಾಗೂ ನಿಮ್ಮ ಗೆಲುವಿನ ಬಗ್ಗೆ ತಿಳಿಸಿ ಎಂದು ಹೇಳಿದ್ದಕ್ಕೆ ಗರಂ ಆದ ಅವರು, 28ಲಕ್ಷ ರೂ.ವರೆಗೂ ಖರ್ಚು ಮಾಡಲು ಅವಕಾಶವಿದೆ. ನಾನು ಗೆದ್ದ ಮೇಲೆ ಅದಕ್ಕಿಂದ ಎರಷ್ಟರಷ್ಟು ಸಂಪಾದಿಸುತ್ತೇನೆ.
ಎಲ್ಲವನ್ನೂ ಬಡವರಿಗೆ ಹಂಚುತ್ತೇನೆ. ನನ್ನನ್ನು ಸೋಲಿಸಿದರೆ ಅದು ಜನರ ಸೋಲೇ. ತಪ್ಪದೆ ಎಲ್ಲರೂ ಮತದಾನ ಮಾಡಿ ಎಂದು ಕೂಡ ಹೇಳಿದ್ದಾರೆ.






