ಮೈಸೂರು,ಮೇ4-ಹುಣೂಸೂರು ಪ್ರಾದೇಶಿಕ ಸಾರಿಗೆ ಇಲಾಖೆಯವರು ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾ.27ರಿಂದ ಮೇ 1ರವರೆಗೆ ವಾಹನಗಳ ತಪಾಸಣೆ ನಡೆಸಿ 312 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
29 ವಾಹನಗಳನ್ನು ವಶಪಡಿಸಿಕೊಂಡು,ತಪಾಸಣೆ ಮತ್ತು ವಾಹನಗಳ ಜಪ್ತಿಯಿಂದ ಒಟ್ಟು 18,27,060 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ಪ್ರಕರಣ ದಾಖಲು
ಚುನಾವಣಾ ಅಕ್ರಮ ತಡೆಗಟ್ಟುವ ಹಿನ್ನೆಲೆಯಲ್ಲಿ ಮೈಸೂರಿನಾದ್ಯಂತ ಸ್ಥಾಪಿಸಿರುವ ಚೆಕ್‍ಪೆÇೀಸ್ಟ್‍ಗಳಲ್ಲಿ ಅಧಿಕಾರಿಗಳು ನಿನ್ನೆ ಸಂಜೆ ತಪಾಸಣೆ ನಡೆಸಿ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅಧಿಕಾರಿಗಳು ತಪಾಸಣೆ ಮಾಡುವ ಸಂದರ್ಭದಲ್ಲಿ ಒಟು ್ಟ2,96,700 ರೂ. ಪತ್ತೆಯಾಗಿದೆ.
ದೇವಾಲಯದ ಚೆಕ್‍ಪೆÇೀಸ್ಟ್‍ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸಿ ದಾಖಲೆಯಿಲ್ಲದೆ ಸಾಗಿಸಲಾಗುತ್ತಿದ್ದ 2,96,700 ರೂ. ನಗದನ್ನು ಪತ್ತೆಹಚ್ಚಿದ್ದಾರೆ.
ತಾಲ್ಲೂಕಿನ ಮಾರಶೆಟ್ಟಿಹಳ್ಳಿ ವಾಸಿ ರುದ್ರಸ್ವಾಮಿ ಎಂಬುವರು ಮೈಸೂರಿನಿಂದ ಸ್ವಗ್ರಾಮಕ್ಕೆ ಕಾರಿನಲ್ಲಿ ಹೋಗುವಾಗ ದೇವಾಲಯ ಚೆಕ್‍ಪೆÇೀಸ್ಟ್ ಬಳಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಕಾರು ತಡೆದು ತಪಾಸಣೆ ನಡೆಸಿದಾಗ, ದಾಖಲೆಗಳಿಲ್ಲದೆ 97,200 ರೂ. ಪತ್ತೆಯಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮೋಸಂಬಾಳನಹಳ್ಳಿ ನಿವಾಸಿ ನಾಗರಾಜು ಎಂಬುವರು ಕಾರಿನಲ್ಲಿ ನಗರಕ್ಕೆ ಬರುತ್ತಿದ್ದಾಗ ಅವರ ಕಾರನ್ನು ತಪಾಸಣೆ ಮಾಡಿದ ಅಧಿಕಾರಿಗಳಿಗೆ 97,500 ರೂ. ದಾಖಲೆಯಿಲ್ಲದ ಹಣ ಪತ್ತೆಯಾಗಿದೆ.
ಗೆಜ್ಜೆಗಳ್ಳಿ ನಿವಾಸಿ ಲೋಕೇಶ್ ಎಂಬುವರು ನಗರದಿಂದ ತಮ್ಮ ಗ್ರಾಮಕ್ಕೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಅವರನ್ನು ಅಧಿಕಾರಿಗಳು ತಪಾಸಣೆ ನಡೆಸಿ 50 ಸಾವಿರ ರೂ. ಪತ್ತೆಯಾಗಿದೆ.
ಇನ್ನೊಂದು ಪ್ರಕರಣದಲ್ಲಿ ಟಿ.ನರಸೀಪುರ ನಿವಾಸಿ ಮೋಹನ್ ಎಂಬುವರ ಬೈಕ್‍ನ್ನು ತಡೆದು ಪರಿಶೀಲಿಸಿದಾಗ ಅವರ ಬಳಿ 52 ಸಾವಿರ ರೂ. ಪತ್ತೆಯಾಗಿದ್ದು, ತಾನು ಗುತ್ತಿಗೆದಾರನಾಗಿದ್ದು , ಕೆಲಸಗಾರರಿಗೆ ಹಣ ನೀಡಲು ಹೋಗುತ್ತಿರುವುದಾಗಿ ಹೇಳಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಣ ವಾಪಸ್ ಪಡೆಯುವಂತೆ ಅಧಿಕಾರಿಗಳು ಮೋಹನ್‍ಅವರಿಗೆ ಸೂಚಿಸಿದ್ದಾರೆ.