ಆಯುರ್ವೇದ ಪ್ರಕಾರ ಜಲಪಾನ ಎಷ್ಟು ಮತ್ತು ಹೇಗೆ ಮಾಡಬೇಕು ?

ನಾವು ಸೇವಿಸುವಂತಹ ಜಲ ಎಷ್ಟು ಪ್ರಮಾಣ ಎಂದರೆ , ನಮಗೆಲ್ಲಾ ತಿಳಿದುರುವ ಹಾಗೆ 2 ರೊಂದ 2 1/2 ಲೀಟರಗಳಷ್ಟು. ಆದರೆ ನಾವು ಯಾವಾಗ ಎಷ್ಟು ಪ್ರಮಾಣದಲ್ಲಿ ಜಲವನ್ನು ಸ್ವೀಕರಿಸಿದಾಗ ನಮ್ಮ ಶರೀರಕ್ಕೆ ಎಷ್ಟು ಉಪಯೋಗ?

ಆಯುರ್ವೇದದ ಪ್ರಕಾರ ಕುಡಿಯುವ ನೀರನ್ನು ಕಾದಾರಿಸಿದ ಮೇಲೆ ಕುಡಿಯಬೇಕು.ಇದರಿಂದ ದೋಷಗಳು ಸಮವಾಗಿರಲು ಅನುಕೂಲಕಾರಿ ಹಾಗು ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಅದೇ ನಾವು ಕಾಯಿಸದೆ ಇರುವ ನೀರುನ್ನು ಕುಡಿದಾಗ ನಮಗೆ ಜೀರ್ಣ ಶಕ್ತಿ ಕಡಿಮೇಯಾಗುತ್ತದೆ.

ಇನ್ನೂ ‘ಫ್ರಿಡ್ಜ್’ನಲ್ಲಿರಿಸಿದ ನೀರಿನ ಸೇವನೆಯಿಂದಾಗಿ ನಮ್ಮ ಹೊಟ್ಟೆಯಲ್ಲಿ ಉತ್ಪತ್ತಿಯಾಗಬೇಕಾದ ಕಣ್ವಗಳು ಕಡಿಮೇಯಾಗುತ್ತದೆ ,ಇದರಿಂದ ನಮ್ಮ ಪಚನ ಕ್ರಿಯೇಯೂ ಕಡಿಮೆಯಾಗುತ್ತದೆ. ಹಾಗು ತಣ್ಣಗಿರುವ ನೀರಿನ ಸೇವನೆಯಿಂದಾಗಿ ರಕ್ತನಾಳಗಳು ಸಂಕುಚಿತಗೂಳ್ಳುತ್ತದೆ.

ಹಾಗಾದರೆ ಜಲಸೇವನೆ ಹೇಗೆ ಮಾಡಬೇಕು ?

ಕುಳಿತುಕೂಂಡೆ ನೀರನ್ನು ಕುಡಿಯಬೇಕು. ನಿಂತು ಕುಡಿಯುವುದರಿಂದ ಮಂಡಿನೋವು, ಸಂಧಿವಾತವಾಗುವ ಸಾದ್ಯತೆ ಹೆಚ್ಚು ಹಾಗು ಅನ್ನನಾಳಗಳಿಗೆ ನೀರಿನ ಜೋತೆ ಗಾಳಿಯೂಸಹ ಹೆಚ್ಚು ಹೋಗುವ ಸಾದ್ಯತೆ ಇದೆ.

ಕಾದಾರಿಸಿದ ನೀರನ್ನು ತಾಮ್ರ, ಬೇಳ್ಳಿ, ಮಣ್ಣಿನ ಮಡಿಕೆಯಲ್ಲಿ ರಾತ್ರಿಯೇ ಶೇಕರಿಸಿರಬೇಕು.

ಬೇಳಗೆ ನಿದ್ದೆಯಿಂದ ಎದ್ದಮೇಲೆ 250ML ಬಿಸಿ ನೀರನ್ನು ಕುಡಿಯಬೇಕು.ಇದನ್ನು ಆಯುರ್ವೇದದಲ್ಲಿ “ಉಷಾಪಾನ ” ಎಂದು ಕರೆಯುತ್ತೇವೆ. ಇದರಿಂದ ಮಲ ವಿಸರ್ಜನೆಗೆ ಅನುಕೂಲಕಾರಿ ಹಾಗು ಮಲಬದ್ಧತೆ, ಮೂಲವ್ಯಾದಿ, ಹಲವಾರು ಚರ್ಮವ್ಯಾದಿಗಳಿಗೆ, ಮೂಡವೆ ಹಾಗು ಮುಖದ ಸುಕ್ಕು ನಿವಾರಿಸಲು, ಕಣ್ಣಿನ ಸುತ್ತ ಕಪ್ಪುಬಣ್ಣ ಇರುವವರಿಗೆ, ಅಮ್ಲಪಿತ್ತದಿಂದ ಬಳಲುತ್ತಿರುವವರಿಗೆ , ಸಕ್ಕರೆ ಕಾಯಿಲೆ ಇರುವವರಿಗೆ ಅನುಕೂಲಹಾರಿ.

ಜಲಸೇವನೆ ಭೋಜನದ ಸಮಯದಲ್ಲಿ ಮಾಡಬೇಕಾದ ವಿಧಾನ-

1.ಭೋಜನದ ಮೂದಲು ಜಲಸೇವನೆ ಮಾಡುವುದರಿಂದ ಜಾಠರಾಗ್ನಿ ಕಡಿಮೇಮಾಡಿ ನಾವು ಸೇವಿಸುವಂತಹ ಆಹಾರ ಪ್ರಮಾಣ ಕಡಿಮೆ ಮಾಡಬಹುದು. ಆದ್ದರಿಂದ ಸಣ್ಣಗಾಗಲು ಯಾರು ಇಚ್ಚಿಸುತ್ತಾರು ಅವರು ಭೋಜನದ ಮೂದಲು ನೀರನ್ನು ಸ್ವೀಕರಿಸಬೇಕು

2.ಭೋಜನದ ಮಧ್ಯ ಮಧ್ಯ ನೀರು ಸೇವಿಸುವುದರಿಂದ ಆಗ್ನಿ ದೀಪನವಾಗುತ್ತದೆ.ಹಾಗು ಸೇವಿಸಿದಂತಹ ಆಹಾರ ಜೀರ್ಣವಾಗಿ ಶರೀರಕ್ಕೆ ಪುಷ್ಠಿದಾಯಕವಾಗುತ್ತದೆ. ಆದ್ದರಿಂದ ಯಾರು ತಮ್ಮ ದೇಹದ ತೂಕವನ್ನು ಕಾಪಾಡಲು ಇಚ್ಚಿಸುತ್ತಾರೂ ಅವರು ಭೋಜನದ ಜೋತೆಯಲ್ಲಿಯೇ ನೀರನ್ನು ಸೇವಿಸಬೇಕು.

3. ಯಾರು ಭೋಜನ ನಂತರ ಅತಿ ಹೆಚ್ಚು ನೀರು ಸೇವನೆಮಾಡುತ್ತಾರೂ ಅವರ ಶರೀರದಲ್ಲಿ ಅವಶ್ಯಕತೆಗಿಂತ ಹಚ್ಚು ಕಫ ಸೇರುತ್ತದೆ ಹಾಗು ಅವರು ಸ್ಥೂಲಕಾಯದವರಾಗುತ್ತಾರೆ. ಆದ್ದರಿಂದ ಯಾರು ಭೋಜನ ಪಶ್ಚಾತ ನೀರನ್ನು ಕುಡಿಯುತ್ತಾರೂ ಅವರು ಸ್ಥೂಲಕಾಯದವರಾಗುತ್ತಾರೆ.

ಲೇಖಕರು
ಡಾ.ಸಿಂಧು ಪ್ರಶಾಂತ್
ಬಿ ಏ ಎಂ ಎಸ್, ಎಮ್.ಡಿ (ಆಲ್‍ಟರ್ನೇಟಿವ್ ಮೆಡಿಸನ್‍), ಎಮ್.ಎಸ್ಸಿ(ಯೋಗ) ಹಾಗು “ನೃತ್ಯ ಪ್ರಾರ್ಥನಾ” ಎಂಬ ಭರತನಾಟ್ಯದ ಸಂಸ್ಥೆಯ ಸ್ಥಾಪಕಿ
ಮೊಬೈಲ್ ಸಂಖ್ಯೆ 9743857575

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ