ಜನಾರ್ಧನ ರೆಡ್ಡಿ ಪಕ್ಷದ ಪರ ಪ್ರಚಾರ ನಡೆಸಿದರೆ ತಪ್ಪೇನಿಲ್ಲ – ರಾಜ್ಯಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ, ಮೇ 2-ಅಕ್ರಮ ಗಣಿಗಾರಿಕೆ ಆರೋಪದಡಿ ಪ್ರಚಾರದಿಂದಲೇ ದೂರ ಉಳಿದಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿ ಮತ್ತೆ ಬಿಜೆಪಿ ಪರ ಪ್ರಚಾರ ನಡೆಸುವ ಸಾಧ್ಯತೆಗಳು ನಿಚ್ಚಳವಾಗಿದೆ.
ಜನಾರ್ಧನ ರೆಡ್ಡಿ ಸಹಾಯ ಪಡೆದು ಪಕ್ಷದ ಪರ ಪ್ರಚಾರ ನಡೆಸಿದರೆ ತಪ್ಪೇನಿಲ್ಲ ಎಂದು ರಾಜ್ಯಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಜನಾರ್ಧನ ರೆಡ್ಡಿಯನ್ನು ಪ್ರಚಾರದಿಂದ ದೂರ ಇಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಕಾಂಗ್ರೆಸ್ ಅವರನ್ನೇ ಗುರಿಯಾಗಿಟ್ಟುಕೊಂಡು ಪದೇ ಪದೇ ದಾಳಿ ನಡೆಸಿದ್ದರಿಂದ ತುಸು ವಿಚಲಿತರಾದ ಬಿಜೆಪಿ ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳದಂತೆ ಅಂತರ ಕಾಯ್ದುಕೊಂಡಿದ್ದರು.
ಖುದ್ದು ಹೈಕಮಾಂಡ್ ನಾಯಕರೇ ದೂರ ಉಳಿಯಬೇಕೆಂದು ಸೂಚಿಸಿದ್ದರಿಂದ ವಿಧಿಯಿಲ್ಲದೆ ಜನಾರ್ಧನ ರೆಡ್ಡಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಗೆಳಯ ಶ್ರೀರಾಮುಲು ಪರ ಅವರು ಪ್ರಚಾರ ನಡೆಸಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಯಡಿಯೂರಪ್ಪ ಇಂದು ಜನಾರ್ಧನ ರೆಡ್ಡಿ ಪಕ್ಷದ ಪರ ಪ್ರಚಾರ ನಡೆಸಿದರೆ ಯಾವ ತಪ್ಪು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರು ಪ್ರಚಾರ ನಡೆಸಿದರೆ ಪಕ್ಷಕ್ಕೆ ಆನೆ ಬಲ ಬರತ್ತದೆ. ಹೈಕಮಾಂಡ್ ಇದರ ಬಗ್ಗೆ ಯಾವ ಸೂಚನೆಯನ್ನು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಕೇವಲ ಊಹಾಪೆÇೀಹ. ಯಾವುದೇ ಕಾರಣಕ್ಕೂ ನಾವು ಅವರ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿಯೇ ಸ್ಪಷ್ಟ ಬಹುಮತದ ಮೂಲಕ ಅಧಿಕಾರ ಹಿಡಿಯುವಾಗ ಬೇರೆ ಪಕ್ಷದವರ ಅಗತ್ಯವೇ ಇಲ್ಲ ಎಂದು ಪುನರುಚ್ಚಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ , ಅವರು ಮಾಜಿ ಪ್ರಧಾನಿಗಳು. ಹಾಗಾಗಿ ಪ್ರಶಂಸಿಸಿರಬಹುದು.ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ