ಕೇದಾರನಾಥ್, ಮೇ 1-ವೀರಶೈವ-ಲಿಂಗಾಯತ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತರು ಎಂದು ಘೋಷಿಸುವಂತೆ ವಿಶ್ವವಿಖ್ಯಾತ ಯಾತ್ರಾಸ್ಥಳ ಕೇದಾರನಾಥ ದೇವಾಲಯದ ಮುಖ್ಯ ಅರ್ಚಕರಾದ ಶ್ರೀ ರವಳ ಭೀಮಾಶಂಕರ ಲಿಂಗ ಶಿವಾಚಾರ್ಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇದಾರ ಜಗದ್ಗುರು ಪೀಠದ ಮುಖ್ಯ ಅರ್ಚಕರಾದ ಶ್ರೀಗಳು(ಕರ್ನಾಟಕದ ವೀರಶೈವ-ಲಿಂಗಾಯತ ಪಂಥಕ್ಕೆ ಸೇರಿದವರು), ವೀರಶೈವ-ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದು ನ್ಯಾಯಸಮ್ಮತ. ಆದರೆ ಕರ್ನಾಟಕ ಸರ್ಕಾರ ಈ ಎರಡೂ ಜನಾಂಗವನ್ನು ಒಡೆಯಲು ಹೊರಟಿರುವುದು ಸರಿಯಲ್ಲ. ವೀರಶೈವ-ಲಿಂಗಾಯತ ಒಂದೇ. ಇದನ್ನು ರಾಜಕೀಯ ಕಾರಣಗಳಿಗಾಗಿ ಮಾಡಲಾಗಿದೆ. ಈ ಬಗ್ಗೆ ನಮ್ಮ ಸಂಘಟನೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಮಾರ್ಚ್ನಲ್ಲಿ ಕೇಂದ್ರಕ್ಕೆ ಪತ್ರ ಬರೆದು, ಲಿಂಗಾಯಿತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿತ್ತು. ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಕೇದಾರನಾಥಕ್ಕೆ ಅಕ್ಟೋಬರ್ 20,2017ರಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ್ದಾಗ ಶಿವಾಚಾರ್ಯರು ಈ ಕುರಿತು ಮನವಿಪತ್ರ ಸಲ್ಲಿದ್ದರು.