ನೀಟ್ – 2018ಕ್ಕಾಗಿ ಕಟ್ಟುನಿಟ್ಟಿನ ವಸ್ತ್ರಸಂಹಿತೆ:

ನವದೆಹಲಿ, ಮೇ 1-ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‍ಇ) ಇದೇ ತಿಂಗಳು 6ರಂದು ನಡೆಸಲಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)-2018ಕ್ಕಾಗಿ ಕಟ್ಟುನಿಟ್ಟಿನ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ.
ಈ ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು (ಪುರುಷರು ಮತ್ತು ಮಹಿಳೆಯರು) ಅನುಸರಿಸಬೇಕಾದ ವಸ್ತ್ರ ಸಂಹಿತೆ ವಿವರಗಳನ್ನು ನೀಡಲಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಪುರುಷರ ವಸ್ತ್ರ ಸಂಹಿತೆ : ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್/ಟಿ-ಶರ್ಟ್‍ಗಳನ್ನು ಧರಿಸುವಂತಿಲ್ಲ. ಅರ್ಧ ತೋಳಿನ ಶರ್ಟ್ ಅಥವಾ ಟಿ-ಶರ್ಟ್ ಧರಿಸಬೇಕು. ಬಟ್ಟೆಗಳು ಹಗುರವಾಗಿರಬೇಕು (ಜಿಪ್‍ಗಳು, ಜೇಬುಗಳು, ದೊಡ್ಡ ಗುಂಡಿಗಳು, ಅಥವಾ ದೊಡ್ಡ ಎಂಬ್ರಾಯಿಡರಿಗಳಿರುವ ಶರ್ಟ್ ಮತ್ತು ಟೀ-ಶರ್ಟ್‍ಗಳನ್ನು ಸಾಧ್ಯವಾದಷ್ಟು ಧರಿಸದೇ ಇರುವುದು ಉತ್ತಮ).
ಪುರುಷ ಅಭ್ಯರ್ಥಿಗಳು ಕುರ್ತಾ-ಪೈಜಾಮ ಧರಿಸುವುದನ್ನು ನಿಷೇಧಿಸಲಾಗಿದೆ. ನೀಟ್-2018ರ ವಸ್ತ್ರ ಸಂಹಿತೆಯಲ್ಲಿ ಟ್ರೌಷರ್(ಪ್ಯಾಂಟ್) ಧರಿಸಲು ಅವಕಾಶ ಇದೆ.
ಪರೀP್ಷÁ ಕೇಂದ್ರಗಳಿಗೆ ಶೂಗಳನ್ನು ಧರಿಸಿ ಬರುವಂತಿಲ್ಲ. ಆದ್ದರಿಂದ ಅಭ್ಯರ್ಥಿಗಳು ಚಪ್ಪಲಿಗಳನ್ನು(ಸ್ಲಿಪ್ಪರ್ ಅಥವಾ ಸ್ಯಾಂಡಲ್) ಧರಿಸಬೇಕು.
ಮಹಿಳಾ ವಸ್ತ್ರ ಸಂಹಿತೆ : ಮಹಿಳಾ ಅಭ್ಯರ್ಥಿಗಳು ಎಂಬ್ರಾಯಿಡರಿ, ಹೂವುಗಳ ಚಿತ್ತಾರ, ದೊಡ್ಡ ಬಟನ್‍ಗಳಿರುವ ವಸ್ತ್ರಗಳನ್ನು ಧರಿಸಬಾರದು. ಬಟ್ಟೆಗಳು ಹಗುರವಾಗಿದ್ದು, ಅರ್ಧ ತೋಳಿನದ್ದಾಗಿರಬೇಕು. ಹೊಸ ವಸ್ತ್ರ ಸಂಹಿತೆ ಪ್ರಕಾರ ಸಲ್ವಾರ್ ಮತ್ತು ಟ್ರೌಷರ್ ಧರಿಸಲು ಅವಕಾಶವಿದೆ.
ಪರೀP್ಷÁ ಕೊಠಡಿಗೆ ಶೂಗಳನ್ನು ಧರಿಸಿ ಬರುವಂತಿಲ್ಲ. ಕಡಿಮೆ ಹಿಮ್ಮಡಿ ಇರುವ ಸ್ಲಿಪ್ಪರ್ ಅಥವಾ ಸ್ಯಾಂಡಲ್ ಧರಿಸಬೇಕು.
ಕಿವಿಯೊಲೆ, ರಿಂಗ್, ಪೆಂಡೆಂಟ್, ನೋಸ್ ರಿಂಗ್, ನಕ್ಲೇಸ್ ಅಥವಾ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವಂತಿಲ್ಲ.
ರೂಢಿಗತ ಅಥವಾ ಸಂಪ್ರದಾಯಿಕ ವಸ್ತ್ರಗಳು, ಬುರ್ಕಾ, ಶಿರ ವಸ್ತ್ರ ಇತ್ಯಾದಿಯನ್ನು ಧರಿಸಬಯಸುವ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದಕ್ಕಿಂತ ಒಂದು ಗಂಟೆ ಮುನ್ನ ಈ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿಗೆ ತಿಳಿಸಿ ಅನುಮತಿ ಪಡೆಯಬೇಕು.
ಇತರ ನಿಯಮಗಳು : ಪರೀP್ಷÁ ಕೊಠಡಿಗೆ ಕೊಂಡೊಯ್ಯಬಾರದ ವಸ್ತುಗಳ ಪಟ್ಟಿಯನ್ನು ಸಿಬಿಎಸ್‍ಇ ತಿಳಿಸಿದ್ದು, ಮುದ್ರಣ ಅಥವಾ ಲಿಖಿತ ಕಾಗದಗಳು, ಕಾಗದಗಳ ತುಣುಕುಗಳು, ಜಾಮಿಟ್ರಿ/ಪೆನ್ಸಿಲ್ ಬಾಕ್ಸ್, ಕ್ಯಾಲ್ಕುಲೇಟರ್, ಪ್ಲಾಸ್ಟಿಕ್ ಪೌಚ್, ರೈಟಿಂಗ್ ಪ್ಯಾಡ್, ಪೆನ್‍ಡ್ರೈವ್‍ಗಳು, ಲಾಗ್ ಟೇಬಲ್, ಸ್ಕ್ಯಾನರ್/ಎಲೆಕ್ಟ್ರಾನಿಕ್ ಪೆನ್ ಇತ್ಯಾದಿಯನ್ನು ನಿಷೇಧಿಸಲಾಗಿದೆ.
ಮೊಬೈಲ್ ಫೆÇೀನ್‍ಗಳು, ಬ್ಲೂಟೂಥ್‍ಗಳು, ಇಯರ್‍ಫೆÇೀನ್, ಮೈಕ್ರೋಫೆÇೀನ್, ಪೇಜರ್, ಹೆಲ್ತ್ ಬ್ಯಾಂಡ್ ಇತ್ಯಾದಿಯನ್ನು ಪರೀP್ಷÁ ಕೊಠಡಿಗೆ ಒಯ್ಯುವಂತಿಲ್ಲ.
ಕೈಗಡಿಯಾರ, ಕ್ಯಾಮೆರಾ, ಲೋಹದ ವಸ್ತುಗಳು, ಪರ್ಸ್, ಸನ್‍ಗ್ಲಾಸ್, ಹ್ಯಾಂಡ್‍ಬ್ಯಾಗ್, ಬೆಲ್ಟ್, ಕ್ಯಾಪ್. ಎಟಿಎಂ/ಕ್ರಿಡಿಟ್/ಡೆಬಿಟ್ ಕಾರ್ಡ್. ಪ್ಲಾಸಿಕ್ಟ್ ಐಡಿ, ಯಾವುದೇ ರಿಮೋಟ್ ಕೀ ಇತ್ಯಾದಿಯನ್ನು ಅಭ್ಯರ್ಥಿಗಳು ಒಯ್ಯುವಂತಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ