ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ – ಅಮಿತ್ ಶಾ

ಹಿರಿಯೂರು,ಮೇ1-ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಕಮೀಷನ್ ದಂದೆ ಸರ್ಕಾರ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ನೆಹರು ಮೈದಾನದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಪರ ಚುನಾವಣೆ ಪ್ರಚಾರ ಮಾಡಿದ ಅವರು, ರಾಜ್ಯದಲ್ಲಿ PiÁಂಗ್ರೆಸ್ ಸರ್ಕಾರ ಬಂದ ನಂತರ ಅತಿ ಹೆಚ್ಚು ಕ್ರೈಮ್‍ಗಳು ನಡೆದಿವೆ. ರೈತರ ಆತ್ಮ ಹತ್ಯೆಗಳು ನಡೆದಿವೆರಾಜ್ಯದ ಖಜಾನೆ ಲೂಟಿಯಾಗಿದೆ, ರೈತರ ಹಿತಾಸಕ್ತಿ ಕಡೇಗಣಿಸಲಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಮನ್ ಮೋಹನ್ ಸಿಂಗ್ ನೇತೃತ್ವದ ಸರ್ಕಾರ 13ನೇ ಹಣಕಾಸು ಯೋಜನೆಯಲ್ಲಿ ಕರ್ನಾಟಕ ರಾಜ್ಯಕ್ಕೆ 88 ಸಾವಿರ 583 ಕೋಟಿ ಹಣವನ್ನು ನೀಡಿತ್ತು, ಆದರೆ ಇದೀಗ ನರೇಂದ್ರಮೋದಿಯವರ ಬಿಜೆಪಿ ಸರ್ಕಾರ ರಾಜ್ಯಕ್ಕೆ 14ನೇ ಹಣಕಾಸು ಯೋಜನೆಯಡಿ 2 ಲಕ್ಷ 19 ಸಾವಿರ ಕೋಟಿಹಣವನ್ನು ನೀಡಿದೆ, ಅಂದರೆ 1 ಲಕ್ಷ 30 ಸಾವಿರ ಕೋಟಿ ಹಣ ಹೆಚ್ಚಿಗೆ ಕರ್ನಾಟಕ ರಾಜ್ಯಕ್ಕೆ ನೀಡಿದೆ, ಅದೇನಾದರು ರಾಜ್ಯದ ಜನರಿಗೆ ತಲುಪಿದಿಯಾ ಈ ಬಗ್ಗೆ ಸಿದ್ದರಾಮಯ್ಯ ಲೆಕ್ಕ ನೀಡಲಿ, ಸಿದ್ದರಾಮಯ್ಯಸರ್ಕಾರ ಲೂಟಿ ಮಾಡುವ ಸರ್ಕಾರ ಇಂತ ಸರ್ಕಾರ ನಿಮಗೆ ಬೇಕಾ? ಭ್ರಷ್ಠಾಚಾರ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟದಿಂದ ಓಡಿಸುವಂತೆ ಕರೆನೀಡಿದರು. ಸಿದ್ದರಾಮಯ್ಯನಿಗೆ ಸೋಲಿನ ಭೀತಿ ಕಾಡುತ್ತಿದೆ ಅದಕ್ಕಾಗಿ ಚಾಮುಂಡೇಶ್ವರಿಯಿಂದ ಬಾದಮಿಗೆ ಓಡಿ ಹೋಗಿದ್ದಾರೆ ಅಲ್ಲಿ ಶ್ರೀರಾಮುಲು ವಿರುದ್ದ ಸೋತು ಮನೆ ಸೇರುತ್ತಾರೆಂದು ಭವಿಷ್ಯ ನುಡಿದರು.
ಶಾಸಕ ತಿಪಾರೆಡ್ಡಿ ಮಾತನಾಡಿ, ಈ ಭಾಗದ ಶಾಸಕರು ಹಿರಿಯೂರು ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ, ಸುಮಾರು ವರ್ಷಗಳಿಂದ ಈ ಭಾಗದ ಜನ ಬರಗಾಲದಿಂದ ನರಳುತ್ತಿದ್ದಾರೆ. ಕಳೆದ 10 ವರ್ಷದಲ್ಲಿ ಒಂದು ಸಾರಿಯೋ ವಿಧಾನ ಸಭೆಯಲ್ಲಿ ಇಲ್ಲಿನ ಶಾಸಕರು ಮಾತನಾಡದೆ ಇರುವುದು ಇಲ್ಲಿನ ಜನರ ರ್ದೌಭಾಗ್ಯ ಎಂದರು.
ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ತಂದೆ ಎ.ಕೃಷ್ಣಪ್ಪ ಕೇಲವೆ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ತಂದೆಯವರ ಆಸೆಯಂತೆ ಈ ಭಾಗದ ಜನರ ಸೇವೆ ಮಾಡಲು ನಾನು ಸ್ಪರ್ಧೆ ಮಾಡಿದ್ದೇನೆ. ನನಗೆ ಆರ್ಶೀವದಿಸಬೇಕೆಂದು ಮನವಿ ಮಾಡಿದರು. ,
ಚಳ್ಳಕೆರೆ ಅಭ್ಯರ್ಥಿ ಕುಮಾರಸ್ವಾಮಿ, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಹೊಳಲ್ಕೆರೆ ಚಂದ್ರಪ್ಪ, ಚಿತ್ರದುರ್ಗ, ರಾಜ್ಯ ಬಿಜೆಪಿ ಓಬಿಸಿ ಉಪಾಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕೆ.ಎಸ್.ನವೀನ್, ಸಿದ್ದೇಶ್ ಯಾದವ್, ಮಾಜಿ ಶಾಸಕರಾದ ಆರ್. ರಾಮಯ್ಯ, ಮುರುಳಿ, ಹೊಸದುರ್ಗದ ಮುಖಂಡ ಲಿಂಗಮೂರ್ತಿ, ನರೇಂದ್ರನಾಥ್, ತಾಲೂಕು ಬಿಜೆಪಿ ಅಧ್ಯಕ್ಷರಾದ ದ್ಯಾಮೇಗೌಡ, ತಾಲೂಕು ಪಂಚಾಯಿತಿ ಸದಸ್ಯರಾದ ಯಶವಂತ್, ನಗರಸಭೆ ಅಧ್ಯಕ್ಷರಾದ ಟಿ. ಚಂದ್ರಶೇಖರ್, ಹೆಚ್.ಎನ್.ನರಸಿಂಹಯ್ಯ, ಕೇಶವಮೂರ್ತಿ, ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ