ಸಿದ್ಧರಾಮಯ್ಯ ಸೋಲುವ ಭೀತಿಯಲ್ಲಿ ಋಣಾತ್ಮಕ ಪ್ರಚಾರದಲ್ಲಿ ತೊಡಗಿದ್ದಾರೆ: ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ

ಬೆಂಗಳೂರು,ಮೇ1- ಸಿದ್ಧರಾಮಯ್ಯ ಸೋಲುವ ಭೀತಿಯಲ್ಲಿದ್ದು ಗಲಿಬಿಲಿಗೊಂಡಿದ್ದಾರೆ. ಹಾಗಾಗಿಯೇ ಋಣಾತ್ಮಕ ಪ್ರಚಾರದಲ್ಲಿ ಅವರು ತೊಡಗಿದ್ದು ಬಿಜೆಪಿ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವೃಥಾ ಆರೋಪ ಮಾಡುತ್ತಿದ್ದಾರೆ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಆಡಳಿತಕ್ಕಾಗಿ ಒಳ ಒಪ್ಪಂದ ಮಾಡಿಕೊಂಡವರು ಯಾರು ಎಂದು ಪ್ರಶ್ನಿಸಿದರು.

ಐದು ವರ್ಷ ಆಡಳಿತ ನಡೆಸಿದ ಪಕ್ಷವು ಸ್ವಾಭಾವಿಕವಾಗಿ ಅವರ ಸಾಧನೆಗಳನ್ನು ಮುಂದಿಟ್ಟು ಚುನಾವಣೆ ಎದುರಿಸುವುದು ವಾಡಿಕೆ. ಆದರೆ ಕಾಂಗ್ರೆಸ್ ಕಾಲಘಟ್ಟದಲ್ಲಿ ಅಭಿವೃದ್ದಿ ಆದದ್ದೇ ಇಲ್ಲ. ನಮ್ಮ ನಡಿಗೆ ಕೃಷ್ಣೆಯ ಕಡೆಗೆ ಎನ್ನುತ್ತಾ ಉತ್ತರ ಕರ್ನಾಟಕಕ್ಕೆ ಸಾವಿರ ಕೋಟಿ ರೂ.

ಭಿವೃದ್ಧಿ ಮಾಡುತ್ತೇವೆಂದರು. ಆಗಲಿಲ್ಲ. ಕರಾವಳಿಯಲ್ಲಿ ಸಾಮರಸ್ಯ ನಡಿಗೆ ಮಾಡಿದರು, ಅಲ್ಲಿ ಕೊಲೆಗಳೇ ನಡೆದು ಹೋದವು, ಅಪರಾಧ ಚಟುವಟಿಕೆ ಮುಂದುವರಿದಿದೆ ಎಂದರು.
ಸಿದ್ಧರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ತಾವೇ ಹೇಳಿಕೊಳ್ಳುತ್ತಿದ್ದಾರೆಯೇ ಹೊರತು ಯಾವುದೇ ಕಾಂಗ್ರೆಸ್ ನಾಯಕರು ಅದನ್ನು ಹೇಳುತ್ತಿಲ್ಲ. ಹಾಗಾಗಿ ಪಕ್ಷದೊಳಗೇ ಅವರು ಅತಂತ್ರದಾರಿದ್ದಾರೆ ಎಂದ ಸದಾನಂದ ಗೌಡ ಮೋದಿ ಅಥವಾ ಅಮಿತ್ ಶಾ ಬರುತ್ತಾರೆ ಎಂದ ಕೂಡಲೇ ಗೊಂದಲಕ್ಕೆ ಒಳಗಾಗುತ್ತಾರೆ. ಉಡಾಫೆ ಮತ್ತು ಬಡಾಯಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಜಾಹೀರಾತುಗಳಲ್ಲೂ ಪ್ರಧಾನಿಯನ್ನು ದೂರುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕೇಂದ್ರದ ಅನುದಾನದಲ್ಲಿ ಶೇ.42ರಷ್ಟು ಪಾಲನ್ನು ರಾಜ್ಯಗಳಿಗೆ ಕೊಟ್ಟ ಮೊದಲ ಪ್ರಧಾನಿ ಮೋದಿ. ಅವರ ಸಾಧನೆ ಎದುರಿಸಲಾಗದೆ ಕಾಂಗ್ರೆಸ್ ಮಾಡುತ್ತಿರುವ ಕುಹಕ ಪ್ರಚಾರಗಳಿಗೆ ಮತದಾರ ಬಲಿಯಾಗುವುದಿಲ್ಲ. ಬಿಜೆಪಿ ಬಹುಮತದೊಂದಿದ್ದೆ ಗೆದ್ದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ