ಕೋಮುವಾದಿ ಬಿಜೆಪಿಗೆ ಬಹಿಷ್ಕರ, ಕಾಂಗ್ರೆಸ್ ಸರ್ಕಾgಕ್ಕೆ ದಿಕ್ಕಾರ; ಜಾತ್ಯತೀತ ಜನತ ದಳ ಮತ್ತು ಬಿಎಸ್‍ಪಿ ಅಭ್ಯರ್ಥಿಗಳಿಗೆ ಬೆಂಬಲ: ಸದಾಶಿವ ಆಯೋಗದ ವರದಿ ಜಾರಿ ಹೋರಟ ಸಮಿತಿ ನಿರ್ಧಾರ

ಬೆಂಗಳೂರು,ಮೇ1- ವಿಧಾನಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಬಹಿಷ್ಕರಿಸಿ, ಕಾಂಗ್ರೆಸ್ ಸರ್ಕಾರವನ್ನು ದಿಕ್ಕರಿಸಿ ಜಾತ್ಯತೀತ ಜನತ ದಳ ಮತ್ತು ಬಿಎಸ್‍ಪಿ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಜಸ್ಟೀಸ್ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಹೋರಟ ಸಮಿತಿ ನಿರ್ಧರಿಸಿದೆ.

ಗಾಂಧಿಭವನದಲ್ಲಿ ನಡೆದ ಒಂದು ದಿನದ ರಾಜ್ಯಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು , ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮಲತಾಯಿ ಧೋರಣೆ ತೋರಿದೆ. ಪರಿಶಿಷ್ಟರ ಮೀಸಲಾತಿ 101ಪರಿಶಿಷ್ಟ ಉಪಜಾರಿಗಳ ಮಧ್ಯೆ ಸಮನಾಗಿ ಹಂಚಿಕೆಯಾಗದೆ ತಾರತಮ್ಯವಾಗಿದೆ ಎಂದು ಸಮಿತಿ ದೂರಿದೆ.

ಇನ್ನು ಬಿಜೆಪಿ ಸಮಾನತೆ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸಿ ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದೆ. 14 ರಾಜ್ಯದಲ್ಲಿ ಕೋಮು, ಜಾತಿ ದಳ್ಳೂರಿ ಬಿತ್ತಿ ದಲಿತರನ್ನು ಕಂಗೆಡಿಸಿದೆ. ಮುಂದಿನ ಚುನಾವಣೆಯಲ್ಲಿ ಇಂಥ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದೆ.

ಈ ಎರಡು ರಾಷ್ಟ್ರೀಯ ಪಕ್ಷಗಳನ್ನು ಚುನಾವಣೆಯಲ್ಲಿ ಸೋಲಿಸಲು ಸಮಿತಿಯಮುಖಂಡರ ನಿಯೋಗವು ಈಗಾಗಲೇ ಪ್ರವಾಸ ಕೈಗೊಂಡಿದ್ದು, ಮೇ 10ರವರೆಗೆ ರಾಜ್ಯಾದ್ಯಂತ ಸಂಚರಿಸಿ ರೈತರಪರವಾದ ಜೆಡಿಎಸ್ ಪಕ್ಷವನ್ನು ಅಂಬೇಡ್ಕರ್ ಅವರ ಆಶಯದಂತೆ ನಡೆಯುವ ಬಿಎಸ್‍ಪಿ ಪಕ್ಷದ ಪರ ಮತ ಪ್ರಚಾರ ಮಾಡಲು ಮುಂದಾಗಿದ್ದೇವೆ ಎಂದು ಸಮಿತಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ