ಬೇಲೂರು, ಮೇ 1- ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ಆಡಳಿತ ವಿಪಲವಾಗಿದೆ ಎಂದು ಆರೋಪಿಸಿ ಪುರಸಭೆ ವ್ಯಾಪ್ತಿಯ 23ನೆ ವಾರ್ಡ್ನಲ್ಲಿ ಸ್ಥಳಿಯರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತ್ತು.
ಪಟ್ಟಣದ 23ನೆ ವಾರ್ಡ್ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದ್ದು, ಅಧಿಕಾರಿಗಳಿಗೆ ಹಾಗೂ ಇಲ್ಲಿನ ಸದಸ್ಯರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ.
ಕನಿಷ್ಠ ಮೂಲಭೂತ ಸೌಕರ್ಯ ನೀಡದ ಸದಸ್ಯರ ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಮೇ 12 ರಂದು ನಡೆಯುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ 23ನೆ ವಾರ್ಡ್ನ ಸರದಾರ್ ಪಾಷ, ಇರ್ಪಾನ್ ಪಾಷ, ಸಿದ್ಧಿಕ್, ಮುನ್ನಾವರ್ ಪಾಷ, ಫಾಜಿóಲ್, ನೂರ್ಜಾನ್, ನಿಸಾ, ಜóಮೀಲಾ, ತಾಸಿನ ಇನ್ನೂ ಮುಂತಾದವರಿದ್ದರು.