ಕೋಲ್ಕತ್ತಾ, ಮೇ.1-ಪಶ್ಚಿಮಬಂಗಾಳದ ಪಂಚಾಯತ್ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಾಬಲ್ಯ ಸಾಧಿಸಿದೆ. ರಾಜ್ಯದ ಒಟ್ಟು 58,692 ಪಂಚಾಯತ್ ಸ್ಥಾನಗಳಲ್ಲಿ 20,000ಕ್ಕೂ ಹೆಚ್ಚು ಸ್ಥಾನಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಮೇ 14ಕ್ಕೆ ನಿಗದಿಯಾಗಿದ್ದು, ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಆದರೆ 58,692 ಸ್ಥಾನಗಳಲ್ಲಿ, 20,076ರಲ್ಲಿ ಟಿಎಂಸಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಆ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ ಅವಿರೋಧವಾಗಿ ಆಯ್ಕೆ ಆಗಿದೆ.
48.650 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ಟಿಎಂಸಿ 16,816(ಶೇ.34.6), ಪಂಚಾಯತ್ ಸಮಿತಿ ಮಟ್ಟದ 9,217 ಸ್ಥಾನಗಳಲ್ಲಿ 3,509(ಶೇ.33.2) ಹಾಗೂ ಜಿಲ್ಲಾ ಪರಿಷತ್ನ 825 ಸ್ಥಾನಗಳಲ್ಲಿ 203(ಶೇ.24.6) ಸ್ಥಾನಗಳಲ್ಲಿ ಮತದಾನಕ್ಕೂ ಮುನ್ನವೇ ಟಿಎಂಸಿ ಗೆಲುವು ಸಾಧಿಸಿದೆ.
ಈ ಹಿಂದೆ 2013ರಲ್ಲೂ ಎಡ ಪಕ್ಷಗಳ ಆಡಳಿತದಲ್ಲಿ 6,800 ಸ್ಥಾನಗಳಲ್ಲಿ ಕಮ್ಯೂನಿಸ್ಟ್ ಪಕ್ಸದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.